
Mangalore; ರಿಕ್ಷಾ ಚಾಲಕನಿಂದ ಪಿಯುಸಿ ವಿದ್ಯಾರ್ಥಿನಿಯ ನಿರಂತರ ಅತ್ಯಾಚಾರ- ಆಕೆ ಈಗ 8 ತಿಂಗಳ ಗರ್ಭಿಣಿ
ಮಂಗಳೂರು; ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ರಿಕ್ಷಾ ಚಾಲಕನೋರ್ವ ನಿರಂತರ ಅತ್ಯಾಚಾರಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ನಡೆದಿದೆ.
ಕಡಬಆಟೋ ರಿಕ್ಷಾ ಚಾಲಕನ ಈ ದುಷ್ಕೃತ್ಯದಿಂದ ಯುವತಿಯು ಎಂಟು ತಿಂಗಳು ಗರ್ಭಿಣಿಯಾಗಿದ್ದಾಳೆ. ಇದೀಗ ಯುವತಿ ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವರಾಜ ಎಂಬ ರಿಕ್ಷಾ ಚಾಲಕ ಯುವತಿಯನ್ನು ಪ್ರೌಢಶಾಲಾ ದಿನಗಳಲ್ಲಿ ಶಾಲೆಗೆ ತನ್ನ ಆಟೋದಲ್ಲಿ ಕರೆದುಕೊಂಡು ಹೋಗಿ ಪರಿಚಯ ಬೆಳೆಸಿದ್ದ. ಯುವತಿ ಇದೀಗ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು ಈಕೆಯನ್ನು ಕೊಯಿಲ ಗ್ರಾಮದ ಬುಡಲೂರು ಗುಡ್ಡೆಯಲ್ಲಿ 2020ರ ಅಕ್ಟೋಬರ್ ತನಕ ಅತ್ಯಾಚಾರ ನಡೆಸಿದ್ದ. ಇದೀಗ ಯುವತಿಯು 8 ತಿಂಗಳು ಗರ್ಭವತಿಯಾಗಿದ್ದು,ಈ ಬಗ್ಗೆ ಯುವತಿಯು ಕಡಬ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಯುವರಾಜ್ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.