ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿರುವ ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಗೂಸಾ ನೀಡಿದ ಸ್ಥಳೀಯರು
Wednesday, June 9, 2021
ಆಂಧ್ರಪ್ರದೇಶ : ಮಹಿಳೆಯೋರ್ವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ನಾಲ್ವರು ಕಾಮುಕರನ್ನು ಸ್ಥಳೀಯರು ಮರಕ್ಕೆ ಕಟ್ಟಿಹಾಕಿ ಸರಿಯಾಗಿ ಗೂಸಾ ನೀಡಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ರಾಯವರಂ ಮಂಡಲದಲ್ಲಿ ನಡೆದಿದೆ.
ಈ ಮಹಿಳೆ ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ನಾಲ್ವರು ಯುವಕರು ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮಹಿಳೆ ಕಾಮುಕರಿಂದ ತಪ್ಪಿಸಿಕೊಂಡು ಮನೆ ಬಳಿ ಹೋಗಿ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಆಕೆಯ ಬೊಬ್ಬೆಗೆ ಸ್ಥಳದಲ್ಲಿ ಜನರು ಜಮಾಯಿಸಿದ್ದು, ಕೈಗೆ ಸಿಕ್ಕಿರುವ ಮೂವರು ಆರೋಪಿಗಳನ್ನು ಮರಕ್ಕೆ ಕಟ್ಟಿಹಾಕಿ ಸರಿಯಾಗಿ ಗೂಸಾ ನೀಡಿದ್ದಾರೆ. ಇವರಲ್ಲಿ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.