-->

ವಿಶ್ವಪರಿಸರ ದಿನದಂದೇ ಈ ಯುವಕರು ಮಾಡಿದ್ದೇನು ಗೊತ್ತಾ?  ಇವರು ನೆಟ್ಟ ಗಿಡ ಕಂಡು  ಪೊಲೀಸರು ಹುಬ್ಬೇರಿಸಿದ್ದೇಕೆ?

ವಿಶ್ವಪರಿಸರ ದಿನದಂದೇ ಈ ಯುವಕರು ಮಾಡಿದ್ದೇನು ಗೊತ್ತಾ? ಇವರು ನೆಟ್ಟ ಗಿಡ ಕಂಡು ಪೊಲೀಸರು ಹುಬ್ಬೇರಿಸಿದ್ದೇಕೆ?

ತಿರುವನಂತಪುರಂ: ವಿಶ್ವ ಪರಿಸರ ದಿನದಂದೇ ಕೇರಳದ ಕೊಲ್ಲಂ ಜಿಲ್ಲೆಯ ಕಂದಚಿರ ಗ್ರಾಮದ ಯುವಕನೋರ್ವ ಇತರರೊಂದಿಗೆ ಸೇರಿ ರಸ್ತೆ ಪಕ್ಕದಲ್ಲಿ ಗಾಂಜಾ ಗಿಡಗಳನ್ನು ನೆಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

ಗಾಂಜಾ ಗಿಡ ನೆಡುವುದನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೊಲ್ಲಂನ ಅಬಕಾರಿ ವಿಶೇಷ ದಳದ ಸಬ್​ ಇನ್ಸ್​ಪೆಕ್ಟರ್​ ಟಿ. ರಾಜೀವ್​ ನೇತೃತ್ವದ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿದಾಗ 60 ಮತ್ತು 30 ಸೆ.ಮೀ ಉದ್ದದ ಗಾಂಜಾ ಗಿಡಗಳು ಕಂದಚಿರದ ಕುರಿಶಾದಿ ಜಂಕ್ಷನ್​ ಮತ್ತು ಬೈಪಾಸ್​ ನಡುವಿನ ರಸ್ತೆಯಲ್ಲಿ ಪತ್ತೆಯಾಗಿವೆ.

ಈ ಬಗ್ಗೆ ಪ್ರತ್ಯಕ್ಷದರ್ಶಿ ನೀಡಿರುವ ಮಾಹಿತಿ ಪ್ರಕಾರ, ಗಾಂಜಾ ವ್ಯಸನಿಯಾಗಿರುವ ಯುವಕನೊಬ್ಬ ಇತರೊಂದಿಗೆ ಸೇರಿ ವಿಶ್ವ ಪರಿಸರ ದಿನದಂದು ಗಾಂಜಾ ಗಿಡಗಳನ್ನು ರಸ್ತೆ ಬದಿಯಲ್ಲಿ ನೆಟ್ಟಿದ್ದಾನೆ. ಅದಕ್ಕೂ ಮುನ್ನ ಗಾಂಜಾ ಗಿಡಗಳು ಇಲ್ಲಿಯೇ ಬೆಳೆಯಬೇಕು ಎಂದು ಹೇಳಿ ಯುವಕರು ಗಿಡಗಳ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. 

ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲಾಗುವುದು. ಗಾಂಜಾಕ್ಕಾಗಿ ಇತರೆ ರಾಜ್ಯಗಳಿಗೆ ಪ್ರಯಾಣಿಸಲು ಕೊರೊನಾ ಲಾಕ್​ಡೌನ್​ ಅಡ್ಡಿಯಾಗಿರುವುದರಿಂದ ಗಾಂಜಾ ಲಾಬಿ ಮಾಡುವವರು ಹೊಸ ದಾರಿಯನ್ನು ಕಂಡುಕೊಂಡಿದ್ದಾರೆಂದು ತಿಳಿದುಬಂದಿದೆ ಎಂದು ಸಹಾಯಕ ಅಬಕಾರಿ ಆಯುಕ್ತರಾದ ಬಿ. ಸುರೇಶ್​ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99