
ಸ್ನೇಹಿತರೊಂದಿಗೆ ಸೇರಿ ಗರ್ಲ್ ಫ್ರೆಂಡ್ ಮೇಲೆ ಅತ್ಯಾಚಾರವೆಸಗಿದ ಕಾಮುಕ..!!
Friday, June 25, 2021
ಉತ್ತರ ಪ್ರದೇಶ: ಸ್ನೇಹಿತರೊಂದಿಗೆ ಸೇರಿ ಗರ್ಲ್ ಫ್ರೆಂಡ್ ಮೇಲೆ ಬಾಯ್ಫ್ರೆಂಡ್ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ನಡೆದಿದೆ.
ಆಕೆಯ ಬಾಯ್ ಫ್ರೆಂಡ್ ರಾತ್ರಿ ವೇಳೆ ಫೋನ್ ಮಾಡಿ ಆಕೆಯನ್ನು ತಕ್ಷಣ ಭೇಟಿಯಾಗುವಂತೆ ತಿಳಿಸಿದ್ದಾನೆ. ಆಕೆ ಸ್ಥಳಕ್ಕೆ ಬರುತ್ತಿದ್ದಂತೆಯೇ ಆತನ ಸ್ನೇಹಿತರನ್ನು ಕರೆದು ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ.ಆಕೆಗಾಗಿ ಹುಡುಕಾಟ ನಡೆಸಿದಾಗ ಅವಳು ಊರ ಹೊರಗೆ ಸಿಕ್ಕಿದ್ದಾಳೆ.
ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಮಾಹಿತಿ ನೀಡಿದ್ದಾಳೆ. ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳ ಬಂಧನಕ್ಕಾಗಿ ಎರಡು ತಂಡ ರಚನೆ ಮಾಡಿದ್ದಾರೆ, ಶೀಘ್ರದಲ್ಲೇ ಅವರ ಬಂಧನ ಮಾಡಲಾಗುವುದು ಎಂದಿದ್ದಾರೆ.