ಮಲೆನಾಡಲ್ಲಿ ನೋ ನೆಟ್ವರ್ಕ್..ಗುಡ್ಡದ ಮೇಲೆ ಟೆಕ್ಕಿಗಳ ಪರದಾಟ..
ಶಿವಮೊಗ್ಗ: ಲಾಕ್ಡೌನ್ ಕಾರಣದಿಂದಾಗಿ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಆನ್ಲೈನ್್ ಶಿಕ್ಷಣ ಪಡೆಯುತ್ತಿದ್ದು ಉದ್ಯೋಗದಲ್ಲಿರುವವರು ವರ್ಕ್ ಫ್ರಮ್ ಹೋಂ ಮಾಡುತ್ತಿದ್ದಾರೆ.ಆದರೆ ಮಳೆಗಾಲ ಆರಂಭಗೊಂಡಿದ್ದು, ನೆಟ್ವರ್ಕ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ 2ಜಿ ನೆಟ್ವರ್ಕ್ ಸಹ ಸರಿಯಾಗಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಗರ ಹಾಗೂ ಹೊಸನಗರ ತಾಲೂಕಿನ ಕುಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಬಹಳನೇ ಇದ್ದು, ನೆಟ್ವರ್ಕ್ ಸಿಗಲಿ ಎಂಬ ಕಾರಣಕ್ಕೆ ಳಬೂಸ್ಟರ್ಗಳನ್ನು ಅಳವಡಿಸಿಕೊಂಡರೂ ನೆಟ್ವರ್ಕ್ ಮಾತ್ರ ಸಿಗುತ್ತಿಲ್ಲ.
ಹೀಗಾಗಿ ಟೆಕ್ಕಿಗಳು,ವಿದ್ಯಾರ್ಥಿಗಳು ಬೆಟ್ಟದ ಮೇಲೆ ಕುರ್ಚಿ ಹಾಕಿಕೊಂಡು ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಲ್ಯಾಪ್ಟ್ಯಾಪ್ ಹಿಡಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.ಮಳೆಯಲ್ಲಿ ಗುಡ್ಡದ ಮೇಲೆ ಛತ್ರಿ ಹಿಡಿದು ನಿಲ್ಲಬೇಕಾದ ಸ್ಥಿತಿ ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳದ್ದಾಗಿದೆ.