ಹಾಲಿವುಡ್ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವಂತಹ ಕನ್ನಡದ ನಟಿ ರಶ್ಮಿಕಾ ಮಂದಣ್ಣ
ಇದೀಗ ಮುಂಬೈನ ಅಪಾರ್ಟ್‌ಮೆಂಟ್‌ವೊಂದಕ್ಕೆ ಶಿಫ್ಟ್ ಆಗಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ''ಹಾ.. ಇವತ್ತು ಕೊನೆಗೂ ಅಪಾರ್ಟ್‌ಮೆಂಟ್‌ಗೆ ನಾನು ಶಿಫ್ಟ್ ಆದೆ. ಎಷ್ಟೊಂದು ಶಾಪಿಂಗ್ ಮಾಡಬೇಕಾಯಿತು (ಶಾಪಿಂಗ್ ಇನ್ನೂ ಮುಗಿದಿಲ್ಲ) (ಅದು ಮುಗಿಯದ ಖರ್ಚು). ಔರಾ ದಿನಪೂರ್ತಿ ಹೊರಗೆ ಇರಬೇಕಾಯಿತು. ಇಬ್ಬರು ಸ್ನೇಹಿತರನ್ನು ನಾನು ಭೇಟಿ ಮಾಡಬೇಕಿತ್ತು. ತಾಯಿ ನನಗೆ ಹೆಲ್ಪ್ ಮಾಡಿದರು. ಸುಸ್ತಾಗಿದ್ದ ಕಾರಣ ಔರಾ ಮತ್ತು ನಾನು ಅಲ್ಲಿಂದ ಬೇಗ ಹೊರಟ್ವಿ'' ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ. ಜೊತೆಗೆ ಶ್ವಾನ ಔರಾ ಫೋಟೋವನ್ನೂ ರಶ್ಮಿಕಾ ಹಂಚಿಕೊಂಡಿದ್ದಾರೆ.