1 ಕೋಟಿ ರೂ. ಮೌಲ್ಯದ 80 ಐಫೋನ್ ಪೊಲೀಸರ ವಶ....
Friday, June 25, 2021
ಹೈದರಾಬಾದ್: ಶಂಶಾಬಾದ್ ಏರ್ಪೋರ್ಟ್ನಲ್ಲಿ ಬರೋಬ್ಬರಿ 1 ಕೋಟಿ ರೂ. ಮೌಲ್ಯದ 80 ಐಫೋನ್ ಗಳನ್ನು ಕಸ್ಟಮ್ಸ್ ಅಧಿಕಾರಿಯಾಗಳು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶಾರ್ಜಾದಿಂದ ಶಂಶಾಬಾದ್ ಏರ್ಪೋರ್ಟ್ಗೆ ಆಗಮಿಸಿದ್ದ ಇಬ್ಬರ ಬ್ಯಾಗ್ನಲ್ಲಿ ಇಷ್ಟೊಂದು ಐಫೋನ್ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಫೋನ್ ಸೀಜ್ ಮಾಡಲಾಗಿದ್ದು, ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಬಂಧಿತರಲ್ಲಿ ಓರ್ವ ಗುಜರಾತ್ ಮೂಲದವನು ಹಾಗೂ ಮತ್ತೋರ್ವ ಹೈದರಾಬಾದ್ನವನು ಎಂದು ತಿಳಿದು ಬಂದಿದ್ದು,
ಲಗೇಜ್ ವಿಭಾಗದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ 1ಕೋಟಿ ರೂ. ಮೌಲ್ಯದ 80 iPhone ಸೀಜ್ ಮಾಡಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದೆ.