
ವಿಷ ಕುಡಿದು ಪ್ರಿಯಕರನ ಮಡಿಲಲ್ಲಿ ಪ್ರಾಣಬಿಟ್ಟ ಪ್ರಿಯತಮೆ ಪ್ರಕರಣಕ್ಕೆ ಟ್ವಿಸ್ಟ್...!!
ಮುದ್ದೇಬಿಹಾಳ(ವಿಜಯಪುರ): ಅನೈತಿಕ ಸಂಬoಧಕ್ಕೆ ವಿವಾಹಿತೆ ಗಂಗೂರು ಗ್ರಾಮದ ರೇಣುಕಾ ಝಳಕಿ ವಿಷ ಸೇವಿಸಿ ತನ್ನ ಪ್ರಿಯಕರನ ಮಡಿಲಲ್ಲೇ ಸಾವಿಗೀಡಾಗಿದ್ದ ಪ್ರಕರಣ ತಿರುವು ಪಡೆದು ಕೊಂಡಿದೆ.
ಸಾವನ್ನಪ್ಪಿದ ರೇಣುಕಾಗೆ ಬಸವರಾಜ ಎಂಬಾತನೊಂದಿಗೆ ಅನೈತಿಕ ಸಂಬಂಧವಿದ್ದು, ಇದರೊಟ್ಟಿಗೆ ಇನ್ನೊಬ್ಬರ ಜೊತೆಗೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಮೊದಲನೇ ಪ್ರಿಯಕರ ಬಸವರಾಜ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.ಇದು ಪೂರ್ವನಿಯೋಜಿತ ಕೊಲೆ ಎಂದು ಮೃತಳ ಸಹೋದರ ಲಕ್ಕಪ್ಪ ನಿಗರಿ ಮುದ್ದೇ ಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ರೇಣುಕಾಳ ಜೊತೆ ಬಸಪ್ಪ ಕೂಡ ವಿಷಸೇವನೆ ಮಾಡಿದ್ದು ಆತನನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಇದೀಗ ಆತ ಚೇತರಿಸಿಕೊಳ್ಳುತ್ತಿದ್ದು ಪೊಲೀಸರ ವಿಚಾರಣೆಗೆ ಒಳಗಾಗಿದ್ದಾನೆ.