ನಟಿ ಊರ್ವಶಿ ರೌಟೇಲಾ ಕೆಲವು ದಿನಗಳ ಹಿಂದೆ ರಾಜಕಾರಣಿ ಮನೋಕ್ ಕುಮಾರ್ ಅವರ ಮೊಮ್ಮಗಳು ಮುಸ್ಕಾನ್ ಗೋಸ್ವಾಮಿ ಮದುವೆಗೆ ಧರಿಸಿದ ಸೀರೆಯ ಬೆಲೆ ಬರೋಬ್ಬರಿ 58.75 ಲಕ್ಷ ರೂಪಾಯಿ ಎನ್ನಲಾಗಿದೆ.
ಇದು ಗುಜರಾತಿನ ಪಟೋಲಾ ಶೈಲಿಯ ಸೀರೆಯಾಗಿದ್ದು, 300 ವರ್ಷವಾದರೂ ಹಾಳಾಗುವುದಿಲ್ಲ ಮತ್ತು ಬಣ್ಣ ಕಳೆದು ಕೊಳ್ಳುವುದಿಲ್ಲ.ಸೀರಗೆ ಬಣ್ಣ ತುಂಬುವುದಕ್ಕೆ 75 ದಿನ, ನೇಯಲು 25 ದಿನಗಳಾಗಿವೆ.ಊರ್ವಶಿ ಧರಿಸಿದ ಈ ಸೀರೆಯನ್ನು ತಯಾರಿಸಲು ಕುಶಲಕರ್ಮಿಗಳು 6 ತಿಂಗಳು ತೆಗೆದುಕೊಂಡಿದ್ದಾರೆ.ಸುಮಾರು 600 ಗ್ರಾಂಗಿಂತಲೂ ಹೆಚ್ಚು ಶುದ್ಧ ರೇಷ್ಮೆ ಬಳಸಲಾಗಿದೆ.