ಮಾಡೆಲ್ ಮಾಡ್ತೇನೆ ಎಂದು ನಂಬಿಸಿ ಅತ್ಯಾಚಾರವೆಸಗಿದ ಫೇಸ್ಬುಕ್ ಫ್ರೆಂಡ್...!!
Saturday, June 19, 2021
ಬನ್ನೇರುಘಟ್ಟ : ಮಾಡೆಲಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ಅತ್ಯಾಚಾರವೆಸಗಿದ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬನ್ನೇರುಘಟ್ಟದ ಬಿಲ್ಲವಾರದಹಳ್ಳಿ ಗ್ರಾಪಂ ಸದಸ್ಯ ಅಹಮದ್ ಪಾಷ ಹಾಗೂ ಆತನ ಕಾರಿನ ಚಾಲಕ ವಾಹಿಬ್ ಬಂಧಿತ ಆರೋಪಿಗಳು. ಹೆಬ್ಬಾಳದ 28 ವರ್ಷದ ಯುವತಿಗೆ ಹದಿನೈದು ದಿನಗಳ ಹಿಂದೆಯಷ್ಟೇ ಫೇಸ್‌ಬುಕ್ ಮೂಲಕ ಅಹಮದ್ ಪಾಷ ಪರಿಚಯವಾಗಿತ್ತು. ಫೇಸ್‌ಬುಕ್ ಮೂಲಕವೇ ಮಹಿಳೆಯ ಫೋನ್ ನಂಬರ್ ಪಡೆದಿದ್ದ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದ.

ಕಳೆದ ಸೋಮವಾರ ಕಾರು ಚಾಲಕ ವಾಹಿಬ್‌ನನ್ನು ಆಕೆಯ ಮನೆಗೆ ಕಳುಹಿಸಿ ಆಕೆಯನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದ. ಮಹಿಳೆಯ ಇಬ್ಬರು ಮಕ್ಕಳನ್ನು ಹಾಲ್‌ನಲ್ಲಿ ಆಟವಾಡಲು ಬಿಟ್ಟು, ಮಹಿಳೆಯನ್ನು ಬೆಡ್‌ರೂಮ್‌ಗೆ ಎಳೆದೊಯ್ದು ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಆಕೆ ವಿರೋಧಿಸಿದಾಗ ಗನ್ ತೋರಿಸಿ ಬೆದರಿಸಿದ್ದಾನೆ. ಅಲ್ಲದೆ, ಆಕೆಯ ನಗ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿಯೂ ಹೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ.