ಮುಂಬಯಿ: ಮಹಾಮಾರಿ ಕೊರೋನ ದಿಂದಾಗಿ ಶಾಲೆಗಳನ್ನು ಸದ್ಯಕ್ಕೆ ತರೆಯಲಾಗುತ್ತಿಲ್ಲ. ಆದ್ದರಿಂದ ಶಿಕ್ಷಕರೆಲ್ಲರೂ ಮನೆಯಲ್ಲಿ ಕುಳಿತು ಮಕ್ಕಳಿಗೆ ಆನ್ಲೈನ್ ತರಗತಿಯನ್ನು ನಡೆಸುತ್ತಿದ್ದಾರೆ. ಹೀಗಿರುವಾಗ ವಿದ್ಯಾರ್ಥಿಯೊಬ್ಬ ಆನ್ಲೈನ್ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ತನ್ನ ಶಿಕ್ಷಕಿಗೆ ಶಿಶ್ನ ತೋರಿಸಿ ವಿಕೃತಿ ಮೆರೆದು ಸಿಕ್ಕಿ ಬಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ
ಜೈಸಲ್ಮೇರ್‌ನ ತನ್ನ ಪೋಷಕರ ನಿವಾಸದಲ್ಲಿ ಉಳಿದು ಆನ್‌ಲೈನ್ ಪಾಠ ಆಲಿಸುತ್ತಿದ್ದ 15 ವರ್ಷದ ವಿದ್ಯಾರ್ಥಿ, ಕಳೆದ ಫೆಬ್ರವರಿಯಿಂದಲೇ ಚೇಷ್ಟೆ ಶುರು ಮಾಡಿದ್ದ ಎಂದು ತಿಳಿದು ಬಂದಿದೆ.ಪಾಠ ಆಲಿಸುವ ನಡುವೆ ದಿಢೀರನೆ ಪ್ಯಾಂಟ್ ಕಳಚಿ ವಿಕೃತಿ ಪ್ರದರ್ಶನಕ್ಕೆ ಇಳಿಯುತ್ತಿದ್ದ. ಮೊದಲು ತಾಳ್ಮೆಯಿಂದಲೇ ಟೀಚರ್ ಬುದ್ಧಿ ಹೇಳಿದ್ದರು. ಆದರೂ ತನ್ನ ಕಪಿಚೇಷ್ಟೆ ಮುಂದುವರಿಸಿದ. ಕೊನೆಗೆ ಟೀಚರ್ ದೂರಿನ ಮೇರೆಗೆ ಶಿಷ್ಯನ ಬಂಧನವಾಗಿದೆ. ‘ನಾನು ತಮಾಷೆಗೆ ಆ ರೀತಿ ಮಾಡಿದೆ. ತಪ್ಪಾಯ್ತು’ ಎಂದು ಈಗ ಆರೋಪಿ ಗೋಗರೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.