ಬ್ಯಾಡ್ವೆಲ್ ವೀರರೆಡ್ಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ 18 ವರ್ಷದ ಸಿರಿಷಾಳನ್ನು ಚರಣ್ ಎಂಬಾತ ಸದಾ ಹಿಂಬಾಲಿಸುತ್ತಾ ಪ್ರೀತಿ ಮಾಡುವಂತೆ ಒತ್ತಾಯಿಸಿ ಆಕೆ ತಿರಸ್ಕರಿಸಿದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾಳೆ.
ಇದನ್ನು ನೋಡಿದ ಗ್ರಾಮಸ್ಥರು ಚರಣ್ನನ್ನು ಹಿಡಿದು, ಮರಕ್ಕೆ ಕಟ್ಟಿ, ಚೆನ್ನಾಗಿ ಥಳಿಸಿ.ಆತ ಮೂರ್ಛೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪೊಲೀಸರು ಚರಣ್ನನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.