ಪಬ್ಜಿ ಲೈವ್ ಸ್ಟ್ರೀಮಿಂಗ್ ವೇಳೆ ಅಶ್ಲೀಲ ಪದ ಬಳಕೆ: ಯುಟ್ಯೂಬರ್ ದಂಪತಿಗಳ ಬಂಧನ
Friday, June 18, 2021
ಚೆನ್ನೈ: ಆನ್ಲೈನ್ ಗೇಮ್ ಪಬ್ಜಿ ಲೈವ್ ಸ್ಟ್ರೀಮಿಂಗ್ ವೇಳೆ ಮಹಿಳೆಯರ ಬಗ್ಗೆ ಅಶ್ಲೀಲ ಭಾಷೆ ಬಳಕೆ ಮತ್ತು ಕೆಟ್ಟದಾಗಿ ಕಾಮೆಂಟ್ ಮಾಡಿದ ಕಾರಣ ಚೆನ್ನೈ ಮೂಲದ ಯೂಟ್ಯೂಬ್ರನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಮದನ್ ಕುಮಾರ್ ಮತ್ತು ಆತನ ಪತ್ನಿ ಇಬ್ಬರು ಯುಟ್ಯೂಬ್ ಚಾನಲ್ ವೊಂದನ್ನು ನಡೆಸುತ್ತಿದ್ದು ಆ ಯೂಟ್ಯೂಬ್ ಚಾನೆಲ್ಗೆ ಸುಮಾರು 8 ಲಕ್ಷ ಚಂದಾದಾರರಿದ್ದಾರೆ. ಅದರಲ್ಲಿ ಬಹುತೇಕರು ಅಪ್ರಾಪ್ತರಾಗಿದ್ದಾರೆ. ಟಾಕ್ಸಿಕ್ ಮದನ್ 18+, ಪಬ್ಜಿ ಮದನ್ ಗರ್ಲ್ ಫ್ಯಾನ್, ರಿಚಿ ಗೇಮಿಂಗ್ವೈಟಿ ಹೆಸರಿನ ಯೂಟ್ಯೂಬ್ ಚಾನೆಲ್ಗಳನ್ನು ದಂಪತಿ ನಡೆಸುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ನಲ್ಲಿ ಮಹಿಳೆಯರನ್ನು ಕೆಟ್ಟದಾಗಿ , ಅಶ್ಲೀಲ ಪದಗಳನ್ನು ಬಳಸಿ ವೀಡಿಯೊಗಳನ್ನು ನೋಡುವ ಮಕ್ಕಳಲ್ಲಿ ವಿಕೃತತೆಯನ್ನು ಉಂಟುಮಾಡುವ ಗೌಪ್ಯತೆ ಮತ್ತು ಘನತೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಯೂಟ್ಯೂಬ್ ಚಾನೆಲ್ ವಿರುದ್ಧ ಚೆನ್ನೈ ನಿವಾಸಿಯೊಬ್ಬರು ದೂರು ನೀಡಿದ್ದರು.
ಪೊಲೀಸರು ಬಂಧಿಸುವ ವಿಚಾರ ತಿಳಿದು ಪರಾರಿಯಾಗುತ್ತಿದ್ದ ಆರೋಪಿ ಮದನ್ ಕುಮಾರ್ನನ್ನು ಚೆನ್ನೈನಿಂದ ಸುಮಾರು 6 ಗಂಟೆಗಳ ಕಾಲ ಹಿಂಬಾಲಿಸಿ ಧರ್ಮಾಪುರಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.