ಏಕಕಾಲದಲ್ಲಿ ತನ್ನಿಬ್ಬರು ಪ್ರಿಯತಮೆಯರ ಮದುವೆಯಾದ ಯುವಕ- ಏನಿದು ಸ್ಪೆಷಲ್ ಲವ್ ಕಹಾನಿ?
Friday, June 18, 2021
ತೆಲಂಗಾಣ: ಇಬ್ಬರು.ಯುವತಿಯರನ್ನ ಪ್ರೀತಿಸಿ ಏಕಕಾಲದಲ್ಲಿ ಒಂದೇ ಮಂಟಪದಲ್ಲಿ ಯುವಕನೊಬ್ಬ ಇಬ್ಬರನ್ನೂ ಮದುವೆಯಾದ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಅರ್ಜುನ್ ಎಂಬಾತ ಶಿಕ್ಷಕ ತರಬೇತಿಯನ್ನು ಪೂರ್ಣಗೊಳಿಸಿ, ಲಾಕ್ಡೌನ್ನಿಂದಾಗಿ ಮನೆಯಲ್ಲಿಯೇ ಇದ್ದ. ಅರ್ಜುನ್ ಗೆ ಇಬ್ಬರು ಅಕ್ಕಂದಿರಿದ್ದು, ಆ ಇಬ್ಬರೂ ಅಕ್ಕಂದಿರಿಗೂ ಉಷಾರಾಣಿ ಹಾಗೂ ಸೂರ್ಯಕಲಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಕಳೆದ ಮೂರು ವರ್ಷದಿಂದ ಒಬ್ಬರಿಗೊಬ್ಬರಿಗೆ ತಿಳಿಯದಂತೆ ಇಬ್ಬರೂ ಯುವತಿಯರನ್ನು ಈತ ಪ್ರೀತಿಸುತ್ತಿದ್ದ.
ಒಂದು ತಿಂಗಳ ಹಿಂದೆ ಅರ್ಜುನ್ ಈ ವಿಚಾರವನ್ನು ಮೂರೂ ಕುಟುಂಬಗಳಿಗೆ ತಿಳಿಸಿದ್ದಾನೆ. ನಂತರ ಎಲ್ಲರ ಒಪ್ಪಿಗೆಯ ಮೇರೆಗೆ ಬುಡಕಟ್ಟು ಸಂಪ್ರದಾಯದ ಪ್ರಕಾರ ಜೂನ್ 14ರಂದು ಉಷಾರಾಣಿ ಹಾಗೂ ಸೂರ್ಯಕಲಾರನ್ನು ಅರ್ಜುನ್ ವರಿಸಿದ್ದಾನೆ.