ವಧುವಿಗೆ ದೆವ್ವದ ಕಾಟವಂತೆ... ವರ ಪರಾರಿ!
Friday, June 18, 2021
ಕನೌಜ್(ಉತ್ತರ ಪ್ರದೇಶ): ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವರ ಪರಾರಿಯಾಗಿದ್ದು ಮದುವೆ ಅರ್ಧಕ್ಕೆ ನಿಂತು ಹೋದ ಘಟನೆ ಉತ್ತರ ಪ್ರದೇಶದ ಕನೌಜ್ನ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ.
ವಧುವಿಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವರ ದೇವೇಂದ್ರ ವೇದಿಕೆಯಿಂದ ಪರಾರಿಯಾಗಿದ್ದಾನೆ.ಇದರಿಂದ ಆಕ್ರೋಶಗೊಂಡಿರುವ ಯುವತಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ,
ಕೊಟ್ವಾಲಿ ಪ್ರದೇಶದ ಮೈನ್ಪುರಿಯ ವಧು ಹಾಗೂ ಫಿರೋಜಾಬಾದ್ನ ವರನಿಗೂ ಮದುವೆ ಫಿಕ್ಸ್ ಆಗಿತ್ತು. ಅದರಂತೆ ಜೂನ್ 16ರಂದು ಮದುವೆ ಕಾರ್ಯಕ್ರಮ ಜೋರಾಗಿ ನಡೆದಿದ್ದವು. ತಾಳಿ ಕಟ್ಟಲು ಕೆಲ ನಿಮಿಷಗಳು ಬಾಕಿ ಇರುವಾಗಲೇ ವೇದಿಕೆ ಮೇಲೆ ವಧು ದೇವೇಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ, ಆತ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದು, ವಧುವಿಗೆ ದೆವ್ವದ ಕಾಟವಿದೆ ಎಂದು ಆರೋಪ ಮಾಡಿದ್ದಾನೆ. ವರನ ಕಡೆಯವರು ಇದೇ ರೀತಿಯ ಆರೋಪ ಮಾಡಿದ್ದು, ಅನಾರೋಗ್ಯ ಪೀಡಿತ ಹುಡುಗಿಯನ್ನ ನಮ್ಮ ಯುವಕನೊಂದಿಗೆ ಮದುವೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಆದ್ರೆ ವರ ದೇವೇಂದ್ರ ಮದುವೆ ಮಾಡಿಕೊಳ್ಳಲು 50 ಸಾವಿರ ರೂ. ವರದಕ್ಷಿಣೆಗೆ ಒತ್ತಾಯಿಸಿದ್ದರು. ಈ ಹಣ ನೀಡಲು ವಧುವಿನ ಕಡೆಯವರು ವಿಫಲಗೊಂಡಿದ್ದರಿಂದ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆ ಬಗ್ಗೆ ವಧುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.