
'ದೆವ್ವಗಳು ಕೊಲೆ ಮಾಡುವಂತೆ ಬೆದರಿಕೆ ಹಾಕ್ತಿವಿ' ಎಂದು ಪೊಲೀಸರ ಮೊರೆ ಹೋದ ವ್ಯಕ್ತಿ...!!
ಪಂಚ ಮಹಲ್(ಗುಜರಾತ್): ಗದ್ದೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ದೆವ್ವಗಳೆರಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕ್ತಿವೆ ನನಗೆ ರಕ್ಷಣೆ ಬೇಕು ಎಂದು ವ್ಯಕ್ತಿಯೊಬ್ಬ ಪೊಲೀಸರ ಮೊರೆ ಹೋಗಿದ್ದಾನೆೆ.
ಗುಜರಾತ್ನ ಪಂಚ ಮಹಲ್ನ ಜೋತ್ವಾಡ್ ಗ್ರಾಮದಲ್ಲಿನ ವ್ಯಕ್ತಿ ಈ ರೀತಿಯಾಗಿ ಪ್ರಕರಣ ದಾಖಲು ಮಾಡಿದ್ದಾನೆ.ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಆತ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ವಿಷಯ ಗೊತ್ತಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವ್ಯಕ್ತಿಯ ಸಹೋದರ, ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಆತ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದಿದ್ದಾರೆ.