ಲವ್ವರ್ ಮೇಲಿನ ಸಿಟ್ಟಿಗೆ ಕುಟುಂಬದ ಐವರ ಕೊಲೆ.. ಇದೊಂದು ಭಯಾನಕ ಸ್ಟೋರಿ..!!
Wednesday, June 30, 2021
ದೇವಾಸ್(ಮಧ್ಯಪ್ರದೇಶ): ಸುಮಾರು 48 ದಿನಗಳ ಬಳಿಕ ಜಮೀನವೊಂದರಲ್ಲಿ ಹೂತು ಹಾಕಿದ್ದ ಹೊರತೆಗೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತರನ್ನ ಮಮತಾ(45), ರೂಪಾಲಿ(21), ದಿಯಾ(14), ಪೂಜಾ(15) ಹಾಗೂ ಪವನ್(6) ಎಂದು ಗುರುತಿಸಲಾಗಿದೆ.
ಸುರೇಂದ್ರ ಅನೇಕ ದಿನಗಳಿಂದ ರೂಪಾಲಿಗೆ ಪರಿಚಯವಿದ್ದ ಕಾರಣ ಮೇಲಿಂದ ಮೇಲೆ ಅವರ ಮನೆಗೆ ಭೇಟಿ ನೀಡುತ್ತಿದ್ದನು. ಈ ವೇಳೆ ಆಕೆ ಜತೆ ಸಂಬಂಧ ಹೊಂದಿದ್ದಾನೆ. ತನದಂತರ ಬೇರೆ ಮಹಿಳೆ ಜತೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದನು.ಇದರ ಬಗ್ಗೆ ರೂಪಾಲಿಗೆ ಗೊತ್ತಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿ, ಇಬ್ಬರು ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ಇದರಿಂದ ಆಕ್ರೋಶಗೊಂಡಿದ್ದ ಸುರೇಂದ್ರ ತಾಳ್ಮೆ ಕಳೆದುಕೊಂಡಿದ್ದಾನೆ. ಹೀಗಾಗಿ ಎಲ್ಲರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ತದನಂತರ ಜಮೀನಿನಲ್ಲಿ 8-10 ಆಳದ ಗುಂಡಿ ತೆಗೆದು ಮುಚ್ಚಿ ಹಾಕಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಸುರೇಂದ್ರ ಹಾಗೂ ಇತರೆ ನಾಲ್ವರು ಶಂಕಿತರ ಬಂಧನ ಮಾಡಲಾಗಿದ್ದು, ಉಳಿದ ಏಳು ಮಂದಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.