ರೇಪ್ ಮಾಡಲು ಬಂದವರಿಂದ ಮಹಿಳೆಯನ್ನು ರಕ್ಷಿಸಿದ ಎಮ್ಮೆ...!!
Wednesday, June 30, 2021
ಸವಣೂರು: ಎಮ್ಮೆ ಮೇಯಿಸಲು ತೆರಳಿದ್ದ ಯುವತಿಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆಯ ಜೊತೆಗಿದ್ದ ಎಮ್ಮೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳಿಂದ ಮಹಿಳೆಯನ್ನು ರಕ್ಷಿಸಿದೆ
ತಾಲೂಕಿನ ಹಿರೇಮರಳಿಹಳ್ಳಿ ಗ್ರಾಮದ ಬಸವರಾಜ ಗಾಳೆಪ್ಪ ದಂಡಿನ್ ಹಾಗೂ ಪರಶುರಾಮ ತಮ್ಮಣ್ಣ ಹಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳು. ಸಂತ್ರಸ್ತ ಮಹಿಳೆಯು ದನ ಮೇಯಿಸುತ್ತಿದ್ದಾಗ ಬಸವರಾಜ ಎಂಬಾತ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಮತ್ತೆ ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.ಇದನ್ನು ಗಮನಿಸಿದ ಎಮ್ಮೆ ತನ್ನ ಮಾಲಕಿಯ ಮೇಲೆ ದೌರ್ಜನ್ಯ ನಡೆಸುತ್ತಿರುವವರನ್ನು ಓಡಿಸಿ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದೆ ಎನ್ನಲಾಗಿದೆ.
ಈ ಕುರಿತು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪರಶುರಾಮ ಹಟ್ಟಿಯನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಬಸವರಾಜ ಪರಾರಿಯಾಗಿದ್ದು, ತನಿಖೆ ಮುಂದುವರೆಸಿದ್ದಾರೆ.