ಮಾಸ್ಕ್ ಯಾಕೆ ಹಾಕಿಲ್ಲ..? ಎಂದು ಪ್ರಶ್ನಿಸಿದ ಮಹಿಳಾ ಕಾನ್ಸ್ಟೇಬಲ್ ಗೆ ಲೈಂಗಿಕ ಕಿರುಕುಳ..
Saturday, June 26, 2021
ನವದೆಹಲಿ: ಮಾಸ್ಕ ಧರಿಸದೆ ಕೋವಿಡ್ ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಯೋರ್ವನನ್ನು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗಳಿಬ್ಬರು ಆತನನ್ನು ತರಾಟೆಗೆ ತೆಗೆದುಕೊಂಡಾಗ ಆತ ಅವರಿಗೆನೇ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮೊಹಮದ್ ಜೈದ್ ಎಂಬ ವ್ಯಕ್ತಿ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಈತ 10 ವರ್ಷದ ಬಾಲಕನೊಂದಿಗೆ ಬೈಕ್ನಲ್ಲಿ ಮಾಸ್ಕ್ ಧರಿಸದೆ ಬರುತ್ತಿದ್ದ ಈತನನ್ನು ಕರ್ತವ್ಯದ ಮೇಲಿದ್ದ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳು ಪ್ರಶ್ನಿಸಿದ್ದಕ್ಕೆ ಈತ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಸದ್ಯ ಈತನ ವಿರುದ್ಧ ಅಮ್ರೋಹ ಠಾಣಾ ಪೊಲೀಸರು ಲೈಂಗಿಕ ಕಿರುಕುಳ ಜತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.