ಮಸ್ಸೂರಿಯ ಪಂಚತಾರಾ ಹೋಟೆಲ್ನಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು.ಈ ವೇಳೆ ಹುಡುಗನ ವರ್ತನೆಗೆ ಬೇಸತ್ತು ಅದು ಆತನ ಜೊತೆ ಸಪ್ತಪದಿ ತುಳಿಯಲು ಹಿಂದೇಟು ಹಾಕಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಈ ಜೋಡಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಬಳಿಕ ಆತ ತನ್ನೊಂದಿಗೆ ಅಸಹ್ಯವಾಗಿ ನಡೆದುಕೊಂಡಿದ್ದಾನೆಂದು ಹುಡುಗಿ ಆರೋಪಿಸಿದ್ದಾಳೆ. ಹೀಗಾಗಿ, ಆತನೊಂದಿಗೆ ತಾನು ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾಳೆ.ಇದರ ಬೆನ್ನಲ್ಲೇ ವಧುವಿನ ಕಡೆಯವರು ಪೊಲೀಸ್ ಪ್ರಕರಣ ದಾಖಲು ಮಾಡಿದ್ದು, ವರನ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.