'ಅಗ್ನಿಸಾಕ್ಷಿ' ಧಾರಾವಾಹಿ ಅಂತ್ಯವಾಗಿ ವರ್ಷದ ಬಳಿಕ ಕೇಳಿಬಂತು ಸಿಹಿಸುದ್ದಿ..
Saturday, June 26, 2021
ಆರು ವರ್ಷಗಳಿಗೂ ಅಧಿಕ ಕಾಲ ಪ್ರಸಾರವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿ ಮುಗಿದು ಒಂದು ವರ್ಷ ಕಳೆದಿದೆ. ಇದೀಗ ಅಗ್ನಿಸಾಕ್ಷಿ ಧಾರಾವಾಹಿ ಮರಾಠಿ ಭಾಷೆಯಲ್ಲಿ ತಯಾರಾಗಲಿದೆ ಎಂಬ ಸಿಹಿ ಸುದ್ದಿಯೊಂದು ಕೇಳಿಬಂದಿದೆ.
ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರು ಕೂಡ 'ಅಗ್ನಿಸಾಕ್ಷಿ' ಸೀರಿಯಲ್ ನೋಡುತ್ತಿದ್ದರು. ಟಿಆರ್‌ಪಿಯಲ್ಲಿಯೂ ಟಾಪ್‌ನಲ್ಲಿದ್ದ ಈ ಸೀರಿಯಲ್ ಒಮ್ಮೆ 19.3 ಟಿಆರ್‌ಪಿ ಗಳಿಸಿ ರೆಕಾರ್ಡ್ ಸೃಷ್ಟಿ ಮಾಡಿತ್ತು. ಈ ಧಾರಾವಾಹಿ ಮರಾಠಿಯಲ್ಲಿ ತಯಾರಾಗಲಿದೆಯಂತೆ.
ಈಗಾಗಲೇ ಕನ್ನಡದಲ್ಲಿ ಅನೇಕ ಧಾರಾವಾಹಿಗಳನ್ನು ತೆಲುಗು, ತಮಿಳು, ಹಿಂದಿಯಿಂದ ಪಡೆದು ರಿಮೇಕ್ ಮಾಡಲಾಗುತ್ತಿದೆ. ಈಗ ಕನ್ನಡದ ಧಾರಾವಾಹಿಯೊಂದು ಮರಾಠಿಯಲ್ಲಿ ತಯಾರಾಗುತ್ತಿರುವುದು ಖುಷಿಯ ವಿಚಾರ. ಈ ಹಿಂದೆ 'ಅಗ್ನಿಸಾಕ್ಷಿ' ತಮಿಳಿನಲ್ಲಿ ತಯಾರಾಗಿತ್ತು.