ಪತ್ನಿ ಕಳೆದುಕೊಂಡ ದುಃಖದಲ್ಲಿ ಪತಿ ಇದ್ದಾಗ..ಸಂಬಂಧಿಕರಿಂದ ಆಸ್ತಿ ಹೊಡೆಯಲು ಮಾಸ್ಟರ್ ಪ್ಲಾನ್..!!
Monday, June 21, 2021
ಬೆಂಗಳೂರು: ಕರೊನಾದಿಂದ ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿ ಪತಿ ಇದ್ದರೆ, ಪತ್ನಿಯ ಸಂಬಂಧಿಕರು ಆಕೆಯ ಆಸ್ತಿ ಕಬಳಿಸುವ ಸಂಚು ರೂಪಿಸುತ್ತಿರುವ ಅಮಾನವೀಯ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಟೆಕ್ಕಿ ಪ್ರವೀಣ್ ಹಾಗೂ ಪತ್ನಿ ನಿಮಿತಾ ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್ ಇಂಜಿನಿಯರ್ಸ್. ಏಪ್ರಿಲ್ 20ರಂದು ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾದ ನಿಮಿತಾ, ಚಿಕಿತ್ಸೆ ಫಲಕಾರಿಯಾಗದೇ ಮೇ 2ರಂದು ಮೃತಪಟ್ಟರು.ಟೆಕ್ಕಿ ಮೃತ ಪತ್ನಿಯ ಆಸ್ತಿ ಹೊಡೆಯಲು ಆಕೆ ಸಂಬಂಧಿಕರು ಪ್ಲಾನ್ ರೂಪಿಸಿದ್ದು,ಆಕೆ ಮೃತಪಟ್ಟ ಘಳಿಗೆ ಸರಿ ಇಲ್ಲ, ರಾಹುಕಾಲ ಇದೆ… ಮೂರು ತಿಂಗಳು ಮನೆಗೆ ಬರಬೇಡ ಎಂದು ಹೇಳಿ ಪತಿ ಪ್ರವೀಣ್ನನ್ನು ಮೃತಳ ಕುಟುಂಬಸ್ಥರು ಬೇರೆ ಕಡೆಗೆ ಕಳುಹಿಸಿದ್ದಾರೆ.
ಇದಾದ ಒಂದು ತಿಂಗಳ ಬಳಿಕ ಪ್ರವೀನ್ ಮನೆಗೆ ಮರಳಿದ್ದಾರೆ. ಅಷ್ಟರಲ್ಲಾಗಲೇ ಮನೆಯಿಲ್ಲಿದ್ದ 5 ರಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 3 ಲಕ್ಷ ರೂ. ನಗದು ಹಾಗೂ ಕಾರನ್ನು ಸಂಬಂಧಿಕರು ದೋಚಿದ್ದಾರೆ. ಮೃತಳ ಬಾವ ಶಿವಪ್ಪ, ಆಕೆಯ ಸಹೋದರಿಯರಾದ ಪ್ರೀತಿ, ಮಮತಾ, ಪಪ್ಪಚ್ಚಿ ಸೇರಿ ಹಲವರಿಂದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪ್ರವೀಣ್ ಆರೋಪಿಸಿದ್ದಾರೆ. ಈ ಬಗ್ಗೆ ಆರ್ಆರ್ ನಗರ ಠಾಣೆಗೆ ದೂರು ನೀಡಿದರೂ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮೃತಳ ಪತಿ ಪ್ರವೀಣ್ ಆಗ್ರಹಿಸಿದ್ದಾರೆ.