
ದೈಹಿಕ ಸಂಪರ್ಕವೇ ಬೆಳೆಸದೆ ಮಗು ನನ್ನದಾಗಲು ಹೇಗೆ ಸಾಧ್ಯ: ಸಂಸದೆ ಪತಿಯ ಪ್ರಶ್ನೆ?
Friday, June 11, 2021
ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಸಂಸದೆ, ಬಂಗಾಳಿ ನಟಿ ನುಸ್ರತ್ ಜಹಾನ್ ಆರು ತಿಂಗಳ ಗರ್ಭಿಣಿಯೆಂಬ ಸುದ್ದಿ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದೆ. ಈ ಕುರಿತು ಹಲವಾರು ಫೋಟೋಗಳನ್ನು ಅವರೇ ಹಂಚಿಕೊಂಡಿದ್ದಾರೆ. ಸೆಲೆಬ್ರಟಿಗಳು ಏನೂ ಮಾಡಿದರೂ ಸುದ್ದಿಯೇ. ಆದರೆ ಕುತೂಹಲದ ಸಂಗತಿ ಎಂದರೆ ಅವರ ಪತಿ, ಉದ್ಯಮಿ ನಿಖಿಲ್ ಜೈನ್ ಅವರು 'ನಾವಿಬ್ಬರೂ ಆರು ತಿಂಗಳಿನಿಂದ ದೈಹಿಕ ಸಂಪರ್ಕವನ್ನೇ ಮಾಡಲಿಲ್ಲ, ಹಾಗಿದ್ದ ಮೇಲೆ ಆರು ತಿಂಗಳ ಗರ್ಭಿಣಿಯಾದರೆ ಆ ಮಗು ನನ್ನದು ಹೇಗಾಗುತ್ತದೆ ಆಗುತ್ತದೆ' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆದ್ದರಿಂದಲೇ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಕುರಿತು ಸುಸ್ರತ್ ಜಹಾನ್ ಮಾತ್ರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅವರು, ಹಳೆಯ ಫೋಟೋಶೂಟ್ ವೀಡಿಯೊ ಹಂಚಿಕೊಂಡು “ಗಟ್ಟಿಯಾಗಿರಿ, ನಿರ್ಭೀತಿಯಿಂದಿರಿ, ಸುಂದರವಾಗಿರಿ” ಎಂದಷ್ಟೇ ಶೀರ್ಷಿಕೆ ಕೊಟ್ಟಿದ್ದಾರೆ.
ಅಂದಹಾಗೆ, ನುಸ್ರುತ್ ಜಹಾನ್ 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸದ್ದರು. ಈ ಹಿಂದೆ ಮಿಸ್ ಕೋಲ್ಕತಾ ಕೂಡ ಆಗಿದ್ದರು. ಇವರಿಗೆ ಯೂತ್ ಐಕಾನ್ ಎಂಬ ಬಿರುದು ನೀಡಿ ಕೂಡಾ ಗೌರವಿಸಲಾಗಿತ್ತು. ನುಸ್ರತ್ ಜಹಾನ್ ಮತ್ತು ನಿಖಿಲ್ ಅವರ ಮದುವೆ 2019ರ ಜೂನ್ ತಿಂಗಳಿನಲ್ಲಿ ಆಗಿತ್ತು. ಇವರು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳ ಸಂಪ್ರದಾಯದಂತೆ ಮದುವೆಯಾಗಿ ಭಾರಿ ಸುದ್ದಿಯಾಗಿದ್ದರು. ಈ ನಡುವೆ ನಿಖಿಲ್ ಜೈನ್ ಅವರು ನಮ್ಮ ಮದುವೆ ಮುರಿದು ಬಿದ್ದಿದೆ ಎಂಬ ಹೇಳಿಕೆ ನೀಡಿದ್ದಾರೆ. ಆರು ತಿಂಗಳಿನಿಂದ ನಮ್ಮದು ಬ್ರೇಕ್ ಅಪ್ ಆಗಿದೆ. ಈ ಮಗು ನನ್ನದಾಗಲು ಹೇಗೆ ಸಾಧ್ಯ ಎಂದಿದ್ದಾರೆ. ಸಾಲದು ಎಂಬುದಕ್ಕೆ ಇಬ್ಬರೂ ಜತೆಗಿರುವ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ.