Mangalore- ಮಕ್ಕಳ ಅಶ್ಲೀಲ ವಿಡಿಯೋ ಶೇರ್ ಮಾಡೋರಿಗೆ ಎಚ್ಚರಿಕೆ- ಕುಡ್ಲದಲ್ಲಿ 3 ಮಂದಿ ಮೇಲೆ ಕೇಸ್!
Friday, June 11, 2021
ಮಂಗಳೂರು: ಮಕ್ಕಳ ಅಶ್ಲೀಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮಂಗಳೂರಿನ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಸಿಐಡಿ ಸ್ವೀಕರಿಸಿರುವ ದೂರಿನ ಪ್ರಾಥಮಿಕ ವಿಚಾರಣೆಯನ್ನು ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತನಿಖೆಗಾಗಿ ಕಳುಹಿಸಿಕೊಟ್ಟಿದೆ.
ಜೂನ್ 24ರಂದು ಮಕ್ಕಳ ಅಶ್ಲೀಲ ವಿಡಿಯೋವನ್ನು ಪ್ರಶಾಂತ್ ಅಲಿಯಾಸ್ ಪಚ್ಚು ಎಂಬಾತ ಡೌನ್ಲೋಡ್ ಮಾಡಿ ದೇವಿಕಾ ನಾಯರ್ ಎಂಬುವವರಿಗೆ Facebook messenger ನಲ್ಲಿ ಶೇರ್ ಮಾಡಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಮೇ 17ರಂದು, ನಾಗೇಶ್ ಸುವರ್ಣ ಎಂಬಾತ facebook ಮೆಸೆಂಜರ್ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಚಾಟ್ ಮಾಡಿರುವ ಹಾಗೂ ಅಪ್ ಲೋಡ್ ಮಾಡಿರುವ ಮಾಹಿತಿ ಇದೆ. ಜೂನ್ 25ರಂದು, ಪ್ರಜ್ವಲ್ ಕೋಟ್ಯಾನ್ ಅಲಿಯಾಸ್ ಪಜ್ಜು ಬಿರ್ವ ಎಂಬಾತ ಮಕ್ಕಳ ವಿಡಿಯೋವನ್ನು ಡೌನ್ಲೋಡ್ ಮಾಡಿ ಕುಲಾಲ್ ಎಂಬ ಹೆಸರಿನ ಇನ್ಸ್ಟಾಗ್ರಾಂಗೆ ಶೇರ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಈ ಮೂರು ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿರುದ್ದ ಕಲಂ 67(ಬಿ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೈಬರ್ ಕ್ರೈಂ ಇಲಾಖೆ ತನಿಖೆ ನಡೆಸಲಾಗುತ್ತಿದೆ.