ಮದುವೆಯಾದ ಮೊದಲ ದಿನವೇ ವಧುವಿಗೆ ದೊಡ್ಡ ಶಾಕ್: ಮುಂದಾಗಿದ್ದೇನು?
Saturday, June 12, 2021
ಗುಂಟೂರು: ತೆನಾಲಿ ಮೂಲದ ಎಂಡಿ ಜಲಾಲುದ್ದೀನ್ ಮತ್ತು ಕೌಸರ್ ಜಾನ್ ದಂಪತಿಯ ಮೂರನೇ ಮಗಳನ್ನು ವಿಜಯವಾಡದ ಆಟೋನಗರ ಮೂಲದ ಖಜಖಾನ್ಗೆ ತೆನಾಲಿಯ ಪಾಂಡುರಂಗ ಪೇಟಾದಲ್ಲಿ ಏಪ್ರಿಲ್ 4ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಕೆನಾಡಗೆ ಹೋಗಿ ನೆಲೆಸೋಣ ಎಂದು ವರ, ನವವಧುವಿಗೆ ಭರವಸೆ ನೀಡಿದ್ದ. ಆದರೆ, ಮದುವೆಯಾದ ಮೊದಲ ರಾತ್ರಿ ವಧುವಿಗೆ ಬಹುದೊಡ್ಡ ಶಾಕ್ ಆಗಿದೆ.
ನಾನು ಯಾವುದಕ್ಕೂ ಉಪಯೋಗವಿಲ್ಲದವನು ಎಂಬ ವರನ ಹೇಳಿಕೆ ಕೇಳಿ ವಧುವಿಗೆ ಆಘಾತವಾಗಿದೆ. ಇತ್ತ ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೀಡಾದ ವಧು, ಕೊನೆಗೆ ಪಾಲಕರಿಗೆ ತಿಳಿಸಿ, ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.