2 ತೊಲ ಚಿನ್ನದ ಸರವನ್ನು ನಾಯಿ ನುಂಗಿತ್ತಾ?
Saturday, June 12, 2021
ಕೊಪ್ಪಳ: ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದ ದಿಲೀಪಕುಮಾರ್ ಹಿರೇಮಠ ಎಂಬುವರು ಪಮಾರಿನ್ ತಳಿಯ ನಾಯಿ ಮರಿಯೊಂದನ್ನ ಸಾಕಿದ್ದಾರೆ. ಆದರೆ, ಶುಕ್ರವಾರ ದಿಲೀಪ್ ಕುಮಾರ್ ತಮ್ಮ ಕೊರಳಲ್ಲಿದ್ದ 2 ತೊಲ ಬಂಗಾರದ ಚೈನ್ ತೆಗೆದು ಪಕ್ಕಕ್ಕಿರಿಸಿ ನಿದ್ದೆಗೆ ಜಾರಿದ್ದಾರೆ. ಈ ವೇಳೆ ನಾಯಿಮರಿ ಚೈನನ್ನು ಕಚ್ಚಿ ತುಂಡು ಮಾಡಿ ತಿಂದುಬಿಟ್ಟಿದೆ.
ನಿದ್ದೆಯಿಂದ ಎದ್ದ ಬಳಿಕ ನಾಯಿ ಬಳಿ ಚೈನ್ ತುಂಡುಗಳನ್ನು ಗಮನಿಸಿದ ಮಾಲೀಕನಿಗೆ ಶಾಕ್ ಆಗಿದೆ. ಕೂಡಲೇ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಚಿಕ್ಕ ಮರಿಯಾದ ಕಾರಣ ಆಪರೇಷನ್ ಬೇಡವೆಂದು ಡಾಕ್ಟರ್ ತಿಳಿಸಿದ್ದಾರೆ. ಇದೆ ವೇಳೆ ನಾಯಿ ಬಹಿರ್ದೆಸೆ ಮಾಡಿದ್ದು, ಒಂದೆರೆಡು ತುಂಡುಗಳು ಬಂದಿವೆ. ಸದ್ಯ 5 ಸಾವಿರ ರೂ. ನೀಡಿ ಮನೆಗೆ ಭದ್ರತೆ ನೀಡಲೆಂದು ತಂದ ನಾಯಿಯಿಂದ 80 ಸಾವಿರ ರೂ. ಕಳೆದುಕೊಳ್ಳುವಂತಾಗಿದೆ.
ಅಲ್ಲದೇ ನುಂಗಿದ ಚೈನ್ ಹೊರಗೆ ಬರುವವರೆಗೂ ಹಗಲು ರಾತ್ರಿ ನಾಯಿ ಮನೆ ಬಿಟ್ಟು ಕದಲದಂತೆ ಮಾಲೀಕರು ನಿದ್ದೆಗೆಟ್ಟು ಕಾಯುವಂತಾಗಿದೆ.