
ಬಿಜೆಪಿ ಜೊತೆ ಅಕಾಲಿ ಮೈತ್ರಿ ಕಡಿತ: ಮುಂದಿನ ಯೋಜನೆ ಏನು?
ನವದೆಹಲಿ: ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡ ಶಿರೋಮಣಿ ಅಕಾಲಿ ದಳ ಮುಂಬರುವ (2022) ವಿಧಾನಸಭಾ ಚುನಾವಣೆಯಲ್ಲಿ ಬಹುಜನ್ ಸಮಾಜ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆ ಜಾರಿಗೆ ತಂದ ನಂತರ ಬಿಎಸ್ಪಿ ಜತೆಗಿನ ಹೊಸ ಮೈತ್ರಿಯೊಂದಿಗೆ ಸುಖ್ ಬೀರ್ ಸಿಂಗ್ ಬಾದಲ್ ನೇತೃತ್ವದ ಪಕ್ಷ ಹಲವಾರು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರ ಹೊಂದಿದೆ ಎಂದು ವರದಿ ತಿಳಿಸಿದೆ.
ಬಿಎಸ್ಪಿ ಮೈತ್ರಿ ಪಂಜಾಬ್ ನ 13 ಸ್ಥಾನಗಳಲ್ಲಿ 11 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಮಾಯಾವತಿ ನೇತೃತ್ವದ ಬಿಎಸ್ಪಿ ಸ್ಪರ್ಧಿಸಿದ್ದ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಅಕಾಲಿ ದಳ 10ರಲ್ಲಿ ಎಂಟು ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು ಎಂದು ವರದಿ ತಿಳಿಸಿದೆ.