ಆನ್ಲೈನ್ ಲವ್ ಸ್ಟೋರಿ : ಸತ್ತ ಹೆಂಡತಿಯ ಇನ್ಸ್ಟಾಗ್ರಾಮ್ನಲ್ಲಿ ಸಿಕ್ಕಿದ್ದೇನು ಗೊತ್ತಾ?
Saturday, June 12, 2021
ವಾಷಿಂಗ್ಟನ್: 25 ವರ್ಷದ ಶಿಕ್ಷಕನ ಪರಿಚಯ ಸಿಸ್ಸಿ ಹ್ಯಾಂಕ್‌ಶಾ ಹೆಸರಿನ ಯುವತಿಗೆ ಆನ್ಲೈನ್ ಮೂಲಕ ಆಗುತ್ತೆ. ಆತನೊಂದಿಗೆ ಸ್ನೇಹ ಬೆಳೆಸಿದ ಅವಳು, ಆತನ ಜೀವನದ ಬಗ್ಗೆ ಕೇಳಿದ್ದಾಳೆ. ಆಗ ಆತ ತನಗೆ ಅದಾಗಲೇ ಮದುವೆಯಾಗಿದ್ದು, ಮಗನಿದ್ದಾನೆ. ಆದರೆ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದ್ದಾನೆ.
ಹೆಂಡತಿ ಸತ್ತು ಹೋಗಿದ್ದಾಳೆ ಎಂದು ಆತ ಹೇಳಿದ ಕಾರಣ ಈಕೆಗೆ ಅವನ ಮೇಲೆ ಪ್ರೀತಿ ನಿಧಾನವಾಗಿ ಹುಟ್ಟಿಕೊಳ್ಳುತ್ತೆ. ಈ ಮಧ್ಯೆ ಶಿಕ್ಷಕನ ಹೆಂಡತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ನಿಟ್ಟಿನಲ್ಲಿ ಆಕೆ ಇನ್ಸ್ಟಾಗ್ರಾಂನಲ್ಲಿ ಆತನ ಹೆಂಡತಿಯ ಖಾತೆಗಾಗಿ ಹುಡುಕಾಡಿದ್ದಾಳೆ. ಆಗ ಆಕೆಗೆ ಶಾಕ್ ಆಗಿದೆ. ಶಿಕ್ಷಕ ಹೇಳಿದ ರೀತಿಯಲ್ಲಿ ಆತನ ಹೆಂಡತಿ ಸತ್ತಿರಲಿಲ್ಲ, ಆಕೆ ಇತ್ತೀಚೆಗೆ ಫೋಟೋ ಪೋಸ್ಟ್ ಮಾಡಿರುವುದೂ ಅಲ್ಲಿ ಕಂಡಿದೆ. ತಕ್ಷಣ ಸಿಟ್ಟಿಗೆದ್ದ ಯುವತಿ ಶಿಕ್ಷಕನಿಗೆ ಈ ಬಗ್ಗೆ ಪ್ರಶ್ನಿಸಿದಾಗ ಆತ ತಾನು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡನಂತೆ. ಈ ವಿಚಾರವನ್ನು ಸಿಸ್ಸಿ ತನ್ನ ಟಿಕ್ಟಾಕ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ.