ನಟ ದರ್ಶನ್ ಮನವಿಗೆ ಸ್ಪಂದಿಸಿದ ರಿಯಲ್ ಸ್ಟಾರ್ ಉಪ್ಪಿ !!
Saturday, June 12, 2021
ಬೆಂಗಳೂರು: ರಿಯಲ್ ಸ್ಟಾರ್’ ಉಪೇಂದ್ರ ಅವರು ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್ ಆನೆಯನ್ನು ದತ್ತು ಪಡೆದಿದ್ದಾರೆ.
ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆದು ಅವುಗಳ ಉಳಿವಿಗೆ ಸಹಕರಿಸಿ ಎಂದು “ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮಾಡಿದ ಮನವಿಗೆ ಆಸಕ್ತರು, ಅಭಿಮಾನಿಗಳಷ್ಟೇ ಅಲ್ಲದೆ, ಚಿತ್ರರಂಗದ ಮಂದಿಯೂ ದರ್ಶನ್ ಮನವಿಯನ್ನು “ಚಾಲೆಂಜ್’ ರೀತಿಯಲ್ಲಿ ಸ್ವೀಕರಿಸಿ ಪ್ರಾಣಿ, ಪಗಳನ್ನು ದತ್ತು ಪಡೆದಿದ್ದಾರೆ.
ದರ್ಶನ್ ಮನವಿಗೆ ಸ್ಪಂದಿಸಿ ರಿಯಲ್ ಸ್ಟಾರ್ ಉಪೇಂದ್ರ ಅವರು ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್ ಆನೆಯನ್ನು ದತ್ತು ಪಡೆದಿದ್ದೇನೆ. ಈ ಮೂಲಕ ಅವರ ಅತ್ಯುತ್ತಮ ಉದ್ದೇಶಕ್ಕೆ ಕೈ ಜೋಡಿಸಿದ್ದೇನೆ’ ಎಂದು ಉಪೇಂದ್ರ ಹೇಳಿಕೊಂಡಿದ್ದಾರೆ ಇನ್ನೂ ಹಲವು ಕಲಾವಿದರೂ ದರ್ಶನ್ ಮನವಿಗೆ ಸ್ಪಂದಿಸಿದ್ದಾರೆ.