
ಕೊರೋನ ಸೋಂಕಿತೆ ಬಳಿಯಿದ್ದ ಚಿನ್ನ ಕಳವು: ಆಸ್ಪತ್ರೆ ಸಿಬ್ಬಂದಿ ಮಾಡಿದ ನೀಚ ಕೃತ್ಯ ಎಂತದ್ದು?
Saturday, June 12, 2021
ಬೆಂಗಳೂರು: ಚಿಕಿತ್ಸೆ ಪಡೆಯುತ್ತಿದ್ದ ಕರೊನಾ ಸೋಂಕಿತೆ ಬಳಿ ಚಿನ್ನ ಮತ್ತು ಮೊಬೈಲ್ ಕಳವು ಮಾಡಿದ ಆರೋಪದ ಮೇಲೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಣಸವಾಡಿಯ ಎಂ.ಜಗನ್ನಾಥ್ ದೂರು ನೀಡಿದ್ದಾರೆ. ಜಗನ್ನಾಥ್ ಅವರು ತಮ್ಮ ತಾಯಿ ಇಂದಿರಾ ಅವರನ್ನು ಕರೊನಾ ಚಿಕಿತ್ಸೆಗಾಗಿ ಮೇ 11ರಂದು ಕ್ಯೂರಾ ಆಸ್ಪತ್ರೆಗೆ ದಾಖಲಿಸಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಜೊತೆಗೆ ವಿಡಿಯೋ ಕಾಲ್ ಮಾಡಿ ಮಗ ಮಾತನಾಡುತ್ತಿದ್ದರು. ಮೇ 16ರಂದು ವಿಡಿಯೋ ಕಾಲ್ ಮಾಡಿದಾಗ ಇಂದಿರಾ ಕತ್ತಿನಲ್ಲಿ ಚಿನ್ನದ ಸರ ನಾಪತ್ತೆಯಾಗಿತ್ತು. ಇದರ ಅನ್ವಯ ಕಮ್ಮನಹಳ್ಳಿಯ ಕ್ಯೂರಾ ಆಸ್ಪತ್ರೆ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣಕ್ಕೆ ಚಿನ್ನದ ಸರ ತೆಗೆದಿರಬೇಕೆಂದು ಸುಮ್ಮನಾಗಿದ್ದರು. ಕೊನೆಗೆ ಚಿಕಿತ್ಸೆ ಲಿಸದೆ ಇಂದಿರಾ ಮೇ 19 ರಂದು ಅಸುನೀಗಿದ್ದರು. ಶವ ಸಂಸ್ಕಾರದ ಬಳಿಕ ಇಂದಿರಾ ಬಳಿಯಿದ್ದ ಚಿನ್ನದ ಸರ ಮತ್ತು ಮೊಬೈಲ್ ಕೇಳಿದಾಗ ಆಸ್ಪತ್ರೆ ಸಿಬ್ಬಂದಿ ಸೂಕ್ತ ಉತ್ತರ ಕೊಟ್ಟಿಲ್ಲ. ಆಸ್ಪತ್ರೆ ಸಿಬ್ಬಂದಿಯೇ ಕಳ್ಳತನ ಮಾಡಿರಬೇಕೆಂದು ದೂರಿನಲ್ಲಿ ಜಗನ್ನಾಥ್ ಉಲ್ಲೇಖಿಸಿದ್ದಾರೆ. ಇದರ ಅನ್ವಯ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.