
ಕೇವಲ ಆಭರಣದಿಂದಲೇ ಮೈಮುಚ್ಚಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾದ ಮಿಯಾ ಖಲೀಫಾ
Saturday, June 12, 2021
ನವದೆಹಲಿ: ನೀಲಿ ಚಿತ್ರತಾರೆಯಾಗಿ ಮೆರೆದು, ಬಳಿಕ ಆ ಕ್ಷೇತ್ರದಿಂದ ಹೊರಗೆ ಬಂದಿರುವ ಮಿಯಾ ಖಲೀಫಾ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಆಕೆ ಬಟ್ಟೆ ತೊಡದೆ ಕೇವಲ ಆಭರಣಗಳಿನದಲೇ ಮೈಮುಚ್ಚಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಬರೀ ಮೈಮೇಲೆ ಹರಳಿನ ಆಭರಣ ತೊಟ್ಟಿರುವ ಫೋಟೋಗಳನ್ನು ಮಿಯಾ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಫ್ರೀ ಹೇರ್ ಬಿಟ್ಟು ತಲೆಯ ಮೇಲೆಯೂ ಆಭರಣಗಳನ್ನೇ ಹೊತ್ತಿರುವ ಮಿಯಾಳ ಈ ಫೋಟೋಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ. 18 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಕೊಟ್ಟಿದ್ದಾರೆ. ಸಾವಿರಾರು ಕಾಮೆಂಟ್ಗಳು ಬಂದಿವೆ.
ಅಂದ ಹಾಗೆ ಮಿಯಾ ಖಲೀಫಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಾರೆ. ಟಿಕ್ಟಾಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ ಹೀಗೆ ಎಲ್ಲ ರೀತಿಯ ಆ್ಯಪ್ಗಳಲ್ಲೂ ಆಕೆ ಸಕತ್ ಫೇಮಸ್. ಇತ್ತೀಚೆಗೆ ಪಾಕಿಸ್ತಾನವು ಆಕೆಯ ಟಿಕ್ಟಾಕ್ ಖಾತೆಯನ್ನು ಬ್ಯಾನ್ ಮಾಡಿತ್ತು. ಅದಕ್ಕೆ ಸಿಟ್ಟಿಗೆದ್ದಿದ್ದ ಮಿಯಾ ಟಿಕ್ಟಾಕ್ ವೀಡಿಯೋಗಳನ್ನು ಟ್ವಿಟ್ಟರ್ನಲ್ಲೂ ಹಾಕುವುದಾಗಿ ಪಾಕಿಸ್ತಾನಿ ಅಭಿಮಾನಿಗಳಿಗೆ ತಿಳಿಸಿದ್ದರು.