
ಪ್ರೇಮಿಗಳನ್ನು ಕಲ್ಲಿನಿಂದ ಹೊಡೆದು ಕೊಂದ ತಂದೆ..
Wednesday, June 23, 2021
ವಿಜಯಪುರ: ಪ್ರೇಮಿಗಳಿಬ್ಬರನ್ನು ಯುವತಿಯ ತಂದೆ ಕಲ್ಲಿನಿಂದ ಹೊಡೆದು ಕೊಲೆಗೈದಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ನಡೆದಿದೆ.
ಬಸವರಾಜ ಬಡಿಗೇರಿ(19) ಹಾಗೂ ಖಾನಾಪುರ ಗ್ರಾಮದ ನಿವಾಸಿ ದಾವಲನಿ ತಂಬಡ ಕೊಲೆಯಾದವರು. ಇವರಿಬ್ಬರ ನಡುವೆ ಪ್ರೀತಿ ಆಗಿತ್ತು. ಇವರಿಬ್ಬರ ಪ್ರೀತಿಗೆ ಯುವತಿಯ ಮನೆಯಲ್ಲಿ ವಿರೋಧವಿತ್ತು ಎನ್ನಲಾಗಿದೆ.
ಇಂದು ಇಬ್ಬರು ಜಮೀನಿನಲ್ಲಿ ಭೇಟಿಯಾದ ವೇಳೆ ದಾವಲನಿಯ ತಂದೆ ಇಬ್ಬರನ್ನೂ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.