-->
19 ವರ್ಷದ ವಿವಾಹಿತೆ  ಗಂಡನ ಮನೆಯಲ್ಲಿ ಸಾವಿಗೆ ಶರಣು

19 ವರ್ಷದ ವಿವಾಹಿತೆ ಗಂಡನ ಮನೆಯಲ್ಲಿ ಸಾವಿಗೆ ಶರಣು

ಕೇರಳ: ವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ಸಾವಿಗೆ ಶರಣಾಗಿದ್ದು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ l ಲಭ್ಯವಾಗಿಲ್ಲ.

19 ವರ್ಷದ ವಿವಾಹಿತ ಮಹಿಳೆ ಸುಚಿತ್ರಾ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಕಳೆದ ಮಾರ್ಚ್​ 21ರಂದು ವಿಷ್ಣು ಹಾಗೂ ಸುಚಿತ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.  ಇಂದು ಬೆಳಗ್ಗೆ ಗಂಡ ವಿಷ್ಣುವಿನ ನಿವಾಸದಲ್ಲಿ ಈಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಇಂದು ಬೆಳಗ್ಗೆ ಉಪಹಾರ ಮಾಡಿ ರೂಂನೊಳಗೆ ಹೋಗಿರುವ ಸುಚಿತ್ರಾ ತುಂಬಾ ಹೊತ್ತಾದರೂ ಹೊರಗಡೆ ಬಂದಿಲ್ಲ. ಡೋರ್ ತೆರೆದು ನೋಡಿದಾಗ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಗಂಡನ ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.



Ads on article

Advertise in articles 1

advertising articles 2

Advertise under the article