ತಿಪಟೂರಿನ ಅಮ್ಮನಬಾವಿ ಗ್ರಾಮದ ನಾಗರಾಜ್ ಎಸ್.ಮೃತ ವ್ಯಕ್ತಿ. ನಾಗರಾಜ್ ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಸಮೀಪದ ಸೋಮೆನಹಳ್ಳಿಯ ಬೇಬಿಕಲಾ ಅವರನ್ನು ಕಳೆದ ವರ್ಷ ವಿವಾಹವಾಗಿದ್ದರು. ಬೇಬಿಕಲಾ ಗಂಡು ಮಗುವಿಗೆ ಜನ್ಮ ನೀಡಿದ್ದು ಹೆರಿಗೆ ಬಳಿಕ ಬೇಬಿಕಲಾ ಪತಿಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ . ಇದರಿಂದ ಕೋಪಗೊಂಡ ನಾಗರಾಜ್, ಪತ್ನಿಯ ಸಂಬಂಧಿಕರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ಹೆದರಿಸಿದ್ದರು.
ಸಂಬಂಧಿಕರ ಮಾತಿನಿಂದ ಮನನೊಂದ ನಾಗರಾಜ್, ಅಮ್ಮನಬಾವಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.