
ನಾಪತ್ತೆಯಾಗಿದ್ದ ಬಿಜೆಪಿ ಮುಖಂಡನ ಮಗಳು ಶವವಾಗಿ ಪತ್ತೆ: ಅತ್ಯಾಚಾರ-ಕೊಲೆ ಶಂಕೆ
Friday, June 11, 2021
ರಾಂಚಿ: ಜಾರ್ಖಂಡ್ ನ ಪಲಾಮು ಜಿಲ್ಲೆಯ ಲಾಲಿಮಟಿ ಅರಣ್ಯ ಪ್ರದೇಶದಲ್ಲಿ ಬಿಜೆಪಿ ಮುಖಂಡನ 16 ವರ್ಷದ ಪುತ್ರಿಯ ಮೃತ ದೇಹವು ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬುಧಾಬರ್ ಗ್ರಾಮದ ನಿವಾಸಿಯಾದ ಬಾಲಕಿಯ ತಂದೆ ಸ್ಥಳೀಯ ಬಿಜೆಪಿ ಮುಖಂಡನಾಗದ್ದ. ಬಾಲಕಿಯು ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆಂದು ಶಂಕೆ ವ್ಯಕ್ತ ಪಡಿಸಲಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಸ್ಥಳದಲ್ಲಿ ಮೊಬೈಲ್ ಫೋನ್ ಒಂದು ಪತ್ತೆಯಾಗಿದೆ. ಇದರ ಆಧಾರದಲ್ಲಿ ಓರ್ವ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. 23 ವರ್ಷದ ಪ್ರದೀಪ್ ಕುಮಾರ್ ಸಿಂಗ್ ಧನುಕ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.