ಸುದ್ದಿಗಳು
ಲೋಡ್ ಆಗುತ್ತಿದೆ...

ಕತ್ರಿನಾ ಕೈಫ್ ಪ್ರೇಮ್ ಕಹಾನಿ ಹುಡುಗ ಯಾರು ಗೊತ್ತಾ? - ಉರಿಯಲ್ಲಿ ಅರಳಿದ ಪ್ರೀತಿ?


ಮುಂಬೈ: ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಬಾಲಿವುಡ್  ನಟಿ ಕತ್ರಿನಾ ಕೈಫ್ . ರಣಬೀರ್ ಕಫೂರ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಕತ್ರಿನಾ ಕೈಫ್ ಪ್ರೀತಿ ಪ್ರೇಮದ ವಿಚಾರವಾಗಿ ಸುದ್ದಿಯಾಗಿರಲಿಲ್ಲ. ಆದರೆ ಈಗ ಕತ್ರಿನಾ ಕೈಫ್ ಮತ್ತು ‘ಉರಿ’ ಸಿನಿಮಾ ಖ್ಯಾತಿಯ ನಟ ವಿಕ್ಕಿ ಕೌಶಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

ಈ  ಜೋಡಿಯ ಲವ್ ಮ್ಯಾಟರ್ ಇದೀಗ ಕನ್ಫರ್ಮ್ ಆಗಿದೆ.  ನಟ ಹರ್ಷವರ್ಧನ್ ಕಪೂರ್ ಅವರು ಇತ್ತೀಚಿಗಿನ ಸಂದರ್ಶನದಲ್ಲಿ ಕೈಫ್ ಹಾಗೂ ವಿಕ್ಕಿಯ ಪ್ರೇಮದ ವಿಚಾರ ರಿವೀಲ್ ಮಾಡಿದ್ದಾರೆ.
ಹರ್ಷ್ ವರ್ಧನ್ ಕಪೂರ್ ಇತ್ತೀಚೆಗೆ ಜೂಮ್ ಚಾಟ್ ಶೋ ಬೈ ಇನ್ವೈಟ್ ಓನ್ಲಿ ಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಡೇಟಿಂಗ್ ವಿಚಾರ ಪ್ರಸ್ತಾಪಿಸಿದ್ದಾರೆ. ‘ವಿಕ್ಕಿ ಮತ್ತು ಕತ್ರಿನಾ ಒಟ್ಟಿಗೆ ಇದ್ದಾರೆ, ಅದು ನಿಜ” ಎಂದು ಅವರು ಹೇಳಿದರು.

ಸದ್ಯ ಕತ್ರಿನಾ ಕೈಫ್ ಹಾಗೂ ವಿಕ್ಕಿ ಡೇಟಿಂಗ್ ವಿಚಾರ ಬಿಟೌನ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ.
ಸುದ್ದಿ ಹಂಚಿಕೊಳ್ಳಿ:
ಇತ್ತೀಚಿನ ಸುದ್ದಿಗಳು
×

WhatsApp Channel

ಬ್ರೇಕಿಂಗ್ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ.

JOIN NOW