ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ: ನೌಕಾಪಡೆಯ ಅಧಿಕಾರಿ ವಿರುದ್ಧ ಯುವತಿ ದೂರು
Tuesday, June 8, 2021
ಮುಂಬೈ: ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡುವುದಲ್ಲದೆ ಲಕ್ಷಾಂತರ ರೂ. ಹಣ ಪಡೆದು ವಂಚನೆಗೈದಿರುವನೆಂದು ಆರೋಪಿಸಿ ಯುವತಿಯೊಬ್ಬರು ನೌಕಾಪಡೆ ಅಧಿಕಾರಿಯೊಬ್ಬರ ವಿರುದ್ಧ ವಿಪಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
31 ವಯಸ್ಸಿನ ಈ ನೌಕಾಧಿಕಾರಿ ವಿವಾಹವಾಗುವುದಾಗಿ ಆಮಿಷವೊಡ್ಡಿ ನಿರಂತರವಾಗಿ ದೈಹಿಕ ಸಂಪರ್ಕ ನಡೆಸಿದ್ದನೆಂದು ಯುವತಿ ಆರೋಪಿಸಿದ್ದಾಳೆ. ದೂರಿನಲ್ಲಿ ಆಕೆಯು ನೌಕಾಧಿಕಾರಿ ಹೋಟೆಲ್‌ಗಳಲ್ಲಿ ಮತ್ತು ನೌಕಾಪಡೆಯ ಹಡಗಿನಲ್ಲಿ ದೈಹಿಕ ಸಂಪರ್ಕ ನಡೆಸಿದ್ದಾನೆಂದು ಆರೋಪಿಸಿದ್ದಾರೆ. ಅಧಿಕಾರಿಯು ನೌಕಾಪಡೆಯ ದೆಹಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಆತನನ್ನು ವಶಕ್ಕೆ ಪಡೆಯಲು ಮುಂಬೈ ಪೊಲೀಸರು ನೌಕಾಪಡೆಯವರನ್ನು ಸಂಪರ್ಕಿಸುತ್ತಿದ್ದಾರೆ.
ಇವರಿಬ್ಬರು ಡೇಟಿಂಗ್ ಆಪ್ನಲ್ಲಿ ಭೇಟಿಯಾಗಿ, ನಂತರ ವೈಯಕ್ತಿಕ ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಇದಾದ ಮೇಲೆ ಪ್ರೀತಿಯ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.