
ರೌಡಿಶೀಟರ್ ಪತ್ನಿ ಜೊತೆ ಅನೈತಿಕ ಸಂಬಂಧ- ಹರಿಯಿತು ನೆತ್ತರು
Wednesday, June 23, 2021
ಬೆಂಗಳೂರು: ಜೈಲಿನಲ್ಲಿರುವ ರೌಡಿಶೀಟರ್ ಅನೀಸ್ ಅಹಮದ್ ಪತ್ನಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಆರೋಪದಡಿ ಮತ್ತೋರ್ವ ರೌಡಿಶೀಟರ್ನನ್ನು ಹಂತಕರು ಕೊಲೆ ಮಾಡಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೈಯದ್ ಕರೀಂ ಅಲಿ ಕೊಲೆಯಾಗಿರುವ ರೌಡಿ. ರೌಡಿಶೀಟರ್ ಅನೀಸ್ ಅಹಮ್ಮದ್ನ ಪತ್ನಿಯೊಂದಿಗೆ ಕರೀಂ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗ್ತಿದೆ. ಇದನ್ನ ಅರಿತಿದ್ದ ಅನೀಸ್ ಜೈಲಿನಿಂದಲೇ ಕರೀಂ ಹತ್ಯೆಗೆ ಸಂಚು ರೂಪಿಸಿದ್ದ.
ಗೋವಿಂದಪುರ ಬಳಿಯ ಆಂಜನೇಯ ದೇವಸ್ಥಾನದ ಬಳಿ ಕರೀಂನನ್ನು ಹಂತಕರು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.