ತವರು ಮನೆಗೆಂದು ಬಂದವಳು ಮತ್ತೆ ಗಂಡನ ಮನೆಗೆ ಹೋಗಲೇ ಇಲ್ಲ..!! ಅಷ್ಟಕ್ಕೂ ಆಕೆಗಾದ ಅನ್ಯಾಯವೇನು ಗೊತ್ತಾ...?
Sunday, June 27, 2021
ಚಂಡೀಗಢ: ಮದುವೆಯಾಗಿ ಗಂಡನ ಮನೆ ಸೇರಿದ್ದ ಮಗಳು ತವರಿಗೆ ಬಂದು ನೀರಿನ ಟ್ಯಾಂಕ್ನಲ್ಲಿ ಹೆಣವಾಗಿ ಬಿದ್ದಿರುವ ಘಟನೆ ಪಂಜಾಬ್ನ ಮುಕ್ತಸರ್ ಸಾಹಿಬ್ನ ಕಿಲಿಯನ್ವಾಲಿ ಗ್ರಾಮದಲ್ಲಿ ನಡೆದಿದೆ.
19 ವರ್ಷದ ಹೆಣ್ಣು ಮಗಳಿಗೆ ಮದುವೆ ಮಾಡಿ ಕೇವಲ 9 ದಿನಗಳು ಕಳೆದಿತ್ತು. ತವರು ಮನೆಯಲ್ಲಿ ಎರಡು ದಿನ ಇದ್ದು ಬರುತ್ತೇನೆ ಎಂದು ಬಂದಿದ್ದಳು. ನಂತರ ಅಂಗಡಿಗೆ ಹೋಗಿ ಬರುತ್ತೇನೆ ಎಂದವಳು ಎಷ್ಟು ಹುಡುಕಿದರೂ ಸಿಗಲಿಲ್ಲ.
ಕೊನೆಗೆ ನೀರಿನ ಟ್ಯಾಂಕ್ನಲ್ಲಿ ಹೆಣವಾಗಿ ಬಿದ್ದಿರುವ ವಿಚಾರ ತಿಳಿದಿದೆ.
ವಿವರಣೆಗೆ ಬರುವುದಾದರೆ ಈಕೆಗೆ ಅದೇ ಗ್ರಾಮದ ಬೇರೂಬ್ಬ ಯುವಕನ ಜೊತೆ ಪ್ರೀತಿಯಾಗಿತ್ತು. ಆದರೆ ಪ್ರೀತಿಯನ್ನು ಮನೆಯಲ್ಲಿ ಹೇಳಿಕೊಳ್ಳುವ ಮುಂಚೆಯೇ ಆಕೆಗೆ ಮನೆಯಲ್ಲಿ ಬೇರೆ ಹುಡುಗನನ್ನು ಹುಡುಕಿ ಮದುವೆ ಗೊತ್ತು ಮಾಡಿದ್ದರು. ಆದ್ದರಿಂದ ಪ್ರೀತಿಯನ್ನು ಯಾರೊಂದಿಗೂ ಹೇಳಿಕೊಳ್ಳಲು ಆಗಲಿಲ್ಲ.
ತವರಿಗೆ ಬಂದಾಗ ತನ್ನ ಲವರ್ ಅನ್ನು ಮತ್ತೆ ಭೇಟಿ ಮಾಡಿದ್ದಾಳೆ. ಇಬ್ಬರೂ ಒಟ್ಟಿಗೆ ಬದುಕುವುದಕ್ಕಂತೂ ಸಾಧ್ಯವಿಲ್ಲ, ಹಾಗಾಗಿ ಇಬ್ಬರೂ ಒಟ್ಟಿಗೆ ಸಾಯೋಣ ಎಂದು ನಿರ್ಧಾರ ಮಾಡಿದ್ದಾರೆ. ಅದರಂತೆ ಇಬ್ಬರೂ ನೀರಿನ ಟ್ಯಾಂಕ್ಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಸಾಯುವುದಕ್ಕೂ ಮುನ್ನ ತಾನು ಮದುವೆಗೆ ತೊಟ್ಟಿದ್ದ ಬಳೆಯನ್ನು ಸಂಪೂರ್ಣವಾಗಿ ಪುಡಿ ಪುಡಿ ಮಾಡಿದ್ದಾಳೆ.
ಈ ವಿಚಾರ ತಿಳಿದ ಕುಟುಂಬ ಮಗಳ ಮನಸ್ಸನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಅವರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.