-->

ಕೊಕೊ ಕೊಲಾ ಟೇಬಲ್ ನಲ್ಲಿದ್ದರೂ, ನೀರು ಕುಡಿಯಿರೆಂದ ಕ್ರಿಸ್ಟಿಯಾನೊ ರೊನಾಲ್ಡೊ -  ಆ ಕಂಪೆನಿ ಗೆ ಭಾರಿ ನಷ್ಟ!

ಕೊಕೊ ಕೊಲಾ ಟೇಬಲ್ ನಲ್ಲಿದ್ದರೂ, ನೀರು ಕುಡಿಯಿರೆಂದ ಕ್ರಿಸ್ಟಿಯಾನೊ ರೊನಾಲ್ಡೊ - ಆ ಕಂಪೆನಿ ಗೆ ಭಾರಿ ನಷ್ಟ!

ಬುಡಾಪೆಸ್ಟ್‌ (ಹಂಗೇರಿ): ಟೇಬಲ್‌ನಲ್ಲಿ ಕೊಕಾಕೊಲಾ ಬಾಟಲ್‌ಗ‌ಳಿದ್ದರೂ, ಅದನ್ನು ಎತ್ತಿ ಬದಿಗಿಟ್ಟ ಕ್ರಿಸ್ಟಿಯಾನ ರೊನಾಲ್ಡೊ, ನೀರಿನ ಬಾಟಲನ್ನು ಕೈಯಲ್ಲಿ ಹಿಡಿದುಕೊಂಡು ನೀರು ಕುಡಿಯಿರಿ ಎಂದು ಜನರಿಗೆ ಕರೆ ನೀಡಿ, ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮಂಗಳವಾರ ಪೋರ್ಚುಗಲ್‌ ಹಾಗೂ ಹಂಗೇರಿ ನಡುವಿನ ಯೂರೊ ಕಪ್‌ ಫ‌ುಟ್‌ಬಾಲ್‌ ಪಂದ್ಯಕ್ಕೂ ಮುನ್ನ ಸಮಕಾಲೀನ ಫುಟ್‌ಬಾಲ್‌ ಜಗತ್ತಿನ ಸರ್ವಶ್ರೇಷ್ಠ ಆಟಗಾರರಲ್ಲೊಬ್ಬ ಹಾಗೂ ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ಟೇಬಲ್‌ನಲ್ಲಿ ಕೊಕಾಕೊಲಾ ಬಾಟಲ್‌ಗ‌ಳನ್ನು ಜೋಡಿಸಿಡಲಾಗಿತ್ತು. ಅದನ್ನು ಎತ್ತಿ ಬದಿಗಿಟ್ಟ ರೊನಾಲ್ಡೊ, ನೀರಿನ ಬಾಟಲನ್ನು ಕೈಯಲ್ಲಿ ಹಿಡಿದುಕೊಂಡು ನೀರು ಕುಡಿಯಿರಿ ಎಂದು ಜನರಿಗೆ ಕರೆ ನೀಡಿದರು!

ಕೊಕಾಕೊಲಾ ಯೂರೊ ಕಪ್‌ನ ಅಧಿಕೃತ ಪ್ರಾಯೋಜಕರಲ್ಲೊಂದು. ಆದ್ದರಿಂದ ಅದನ್ನು ಅಲ್ಲಿಡುವುದು ಶಿಷ್ಟಾಚಾರ. ಅದನ್ನೇ ಬದಿಗೆ ಸರಿಸಿರುವುದರಿಂದ ರೊನಾಲ್ಡೊ ವಿರುದ್ಧ ಸಂಘಟಕರು ಶಿಸ್ತುಕ್ರಮ ತೆಗೆದು ಕೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ ಪರಿಸ್ಥಿತಿ ಎಲ್ಲರಲ್ಲೂ ಕುತೂಹಲ ಮೂಡಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99