-->
Mangalore; ಮೊಬೈಲ್ ಗೆ ಬಂದ ಆ ಒಂದು SMS ನಂಬಿ ಕುಡ್ಲದ ವ್ಯಕ್ತಿ ಕಳೆದುಕೊಂಡದ್ದು 65 ಸಾವಿರ!

Mangalore; ಮೊಬೈಲ್ ಗೆ ಬಂದ ಆ ಒಂದು SMS ನಂಬಿ ಕುಡ್ಲದ ವ್ಯಕ್ತಿ ಕಳೆದುಕೊಂಡದ್ದು 65 ಸಾವಿರ!


ಮಂಗಳೂರು; ಮಂಗಳೂರಿನ ವ್ಯಕ್ತಿಯೊಬ್ಬರ ಮೊಬೈಲ್​ ಗೆ ಬಂದ SMS ನ್ನು ನಂಬಿ 65 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಈ ವ್ಯಕ್ತಿಗೆ ಜೂನ್ 13 ರಂದು ರಾತ್ರಿ ಮೊಬೈಲ್​ಗೆ SMS ಬಂದಿತ್ತು. ಇದರಲ್ಲಿ "verify important message from SBI" ಎಂದು ಬರೆಯಲಾಗಿತ್ತು. ಜೊತೆಗೆ ಅದರಲ್ಲಿ ಒಂದು ಲಿಂಕ್‌ ಕೂಡ ಕಳುಹಿಸಲಾಗಿತ್ತು.ಈ ಲಿಂಕ್ ಕ್ಲಿಕ್ ಮಾಡಿದಾಗ ಎಸ್​ಬಿಐ ಬ್ಯಾಂಕ್​ನ ನಕಲಿ ವೆಬ್ ಪೇಜ್ ಓಪನ್ ಆಗಿತ್ತು. ಅರ್ಜಿದಾರರಿಗೆ ಯೂಸರ್ ನೇಮ್, ಪಾಸ್ ವರ್ಡ್ ತುಂಬಲು ತಿಳಿಸಿದ ನಂತರ ಓಟಿಪಿ ವಿವರ ಪಡೆದುಕೊಂಡು ಅವರ ಖಾತೆಯಲ್ಲಿ ಇದ್ದ ರೂ 65 ಸಾವಿರ ಹಣ ವರ್ಗಾಯಿಸಲಾಗಿದೆ.

 ಬ್ಯಾಂಕ್​ನ ಹೆಸರಿನಲ್ಲಿ ಬಂದ ಸಂದೇಶವನ್ನು ಕ್ಲಿಕ್ ಮಾಡಿದಕ್ಕೆ ಈ ವ್ಯಕ್ತಿ 65 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.ಇವರು ಆರ್ಯ ಸಮಾಜ ರಸ್ತೆಯಲ್ಲಿ ಇರುವ ಎಸ್​ಬಿಐ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು‌ಈ ಖಾತೆಗೆ ಸಂಬಂಧಿಸಿದಂತೆ ಮೆಸೆಜ್ ಬಂದಿದೆ ಎಂದು  ನಂಬಿದ್ದರು. ಆದರೆ ಅವರು ನಕಲಿ ವೆಬ್ ಪೇಜ್ ಗೆ  ಭೇಟಿ ನೀಡಿ ಹಣ ಕಳೆದುಕೊಂಡಿದ್ದಾರೆ.

 ಇದೀಗ ಈ ವ್ಯಕ್ತಿ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99