ನಟ ಕಿಚ್ಚ ಸುದೀಪ್ ಮತ್ತೆ ಬಂದು ಈ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಲಿದ್ದಾರಂತೆ. ಬಿಗ್ಬಾಸ್ ಕಾರ್ಯಕ್ರಮ ಮೊಟಕುಗೊಳ್ಳುವಷ್ಟರಲ್ಲಿ 72ದಿನ ಮುಗಿದಿತ್ತು. ಇದೀಗ 73ನೇ ದಿನದಿಂದ ಕಾರ್ಯಕ್ರಮ ಮುಂದುವರೆಯಲಿದೆ.
ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಪ್ರಾರಂಭವಾಗಿದ್ದು, ಜೂನ್ 21ರಿಂದ ಪುನರಾರಂಭವಾಗಲಿದೆ ಎಂದು ಹೇಳಲಾಗ್ತಿದೆ.ಕಾರ್ಯಕ್ರಮ ಮೊಟಕುಗೊಳ್ಳುವ ಮುನ್ನ ಮನೆಯಲ್ಲಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಅರವಿಂದ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ರಘು ಗೌಡ, ಶಮಂತ್ ಗೌಡ ಮತ್ತು ಚಕ್ರವರ್ತಿ ಚಂದ್ರಚೂಡ್ ಇದ್ದರು.
ಈ ಎಲ್ಲ ಸ್ಪರ್ಧಿಗಳ ಜೊತೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ದಿವ್ಯಾ ಉರುಡುಗ ಸಹ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.