-->

ನಟ ದರ್ಶನ್ ಮನವಿಗೆ ಮೈಸೂರು ಮೃಗಾಲಯದ ಜಾಗ್ವಾರ್ ದತ್ತು ಪಡೆದ ಅಮೂಲ್ಯ ದಂಪತಿ

ನಟ ದರ್ಶನ್ ಮನವಿಗೆ ಮೈಸೂರು ಮೃಗಾಲಯದ ಜಾಗ್ವಾರ್ ದತ್ತು ಪಡೆದ ಅಮೂಲ್ಯ ದಂಪತಿ

ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯದ ಮೃಗಾಲಯಗಳಲ್ಲಿನ ಪ್ರಾಣಿ, ಪಕ್ಷಿಗಳನ್ನು ದತ್ತು ಸ್ವೀಕರಿಸುವಂತೆ ಸ್ಥಿತಿ ಕಂಡು ಸ್ಯಾಂಡಲ್‌ವುಡ್ ನಟ ದರ್ಶನ್ ಮನವಿ ಮಾಡಿದ್ದರು.

ಅವರ ಮನವಿಗೆ ಬಹಳಷ್ಟು ನಟ-ನಟಿಯರು ಸ್ಪಂದಿಸಿದ್ದು,  ಈಗಾಗಲೇ ರಾಜ್ಯಾದ್ಯಂತ ಇರುವ 9 ಮೃಗಾಲಯಗಳ ಹಲವು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಇತ್ತೀಚೆಗಷ್ಟೇ, ಸ್ಯಾಂಡಲ್‌ವುಡ್‌ನ ನಟಿಯರಾದ ಪ್ರಿಯಾಂಕಾ ತಿಮ್ಮೇಶ್ ಮತ್ತು ಅದ್ವಿತಿ ಶೆಟ್ಟಿ ಮೈಸೂರು ಮೃಗಾಲಯದಲ್ಲಿನ ಬ್ಲಾಕ್ ಬಕ್ ಮತ್ತು ನಕ್ಷತ್ರ ಆಮೆಯನ್ನು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.

ಇದೀಗ ಆ ಸಾಲಿಗೆ ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್​ ಸೇರಿಕೊಂಡಿದ್ದು, ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜಾಗ್ವಾರ್​ವೊಂದನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಜಗದೀಶ್​, ಜಾಗ್ವಾರ್ ದತ್ತು ಪಡೆಯಲು ಪ್ರೇರಣೆ ನೀಡಿದ್ದಕ್ಕಾಗಿ ದರ್ಶನ್​ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಸಂಕಷ್ಟದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ನೆರವು ನೀಡಿ ಎಂದು ದರ್ಶನ್​ ಮನವಿ ಮಾಡಿದ ಒಂದೇ ವಾರದಲ್ಲಿ ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿರುವುದು ವಿಶೇಷ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99