-->

ಡ್ರಗ್ಸ್ ವಿಚಾರದಲ್ಲಿ ನಾನು ಟಾರ್ಗೆಟ್ ಆಗಿದ್ದೇನೆ: ನಟಿ ರಾಗಿಣಿ ದ್ವಿವೇದಿ

ಡ್ರಗ್ಸ್ ವಿಚಾರದಲ್ಲಿ ನಾನು ಟಾರ್ಗೆಟ್ ಆಗಿದ್ದೇನೆ: ನಟಿ ರಾಗಿಣಿ ದ್ವಿವೇದಿ

ಬೆಂಗಳೂರು: ಡ್ರಗ್ಸ್ ವಿಚಾರದಲ್ಲಿ  ಸ್ಪಷ್ಟವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನಾವು ತಪ್ಪು ಮಾಡಿಲ್ಲಾ ಅಂದಮೇಲೆ ಚಿಂತೆ ಮಾಡಿಕೊಳ್ಳಬಾರದು ಎಂದು ನಟಿ ರಾಗಿಣಿ ದ್ವಿವೇದಿ ವಿಜಯಪುರ ನಗರಕ್ಕೆ ಭೇಟಿ ನೀಡಿರುವ ಸಂದರ್ಭ ಮಾತನಾಡಿದ್ದಾರೆ. 

ಜನರಿಗೆ ನನ್ನ ಮೇಲೆ ಪ್ರೀತಿ, ವಿಶ್ವಾಸವಿದೆ. ಹೆಣ್ಣು ಮಕ್ಕಳು ಅಂದರೆ ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತದೆ. ಬ್ಲೇಮ್ ಮಾಡೋ ಬದಲು ಎಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲಿ ಸರಿಯಾಗಿದ್ದರೆ ಸಾಕು ಎಂದು ಹೇಳಿದರು.

ಕನ್ನಡ ಫೀಲ್ಟ್ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ವಿಚಾರವಾಗಿ ಮಾತನಾಡಿದ ನಟಿ ರಾಗಿಣಿ, ಕಾಸ್ಟಿಂಗ್ ಕೌಚ್ ಅನ್ನೋದು ನನ್ನ ಪ್ರಕಾರ ಒಂದು ಸಖತ್ ಸ್ಟುಪಿಡ್ ವರ್ಡ್. ನೀವು ನಡೆಸುವ ಜೀವನದ ಜರ್ನಿ ಮೇಲೆ ಅದು ಡಿಪೆಂಡ್ ಆಗಿರುತ್ತೆ. ಯಾವತ್ತೂ ಒಂದೇ ಕೈಯಲ್ಲಿ ಚಪ್ಪಾಳೆ ಆಗೋದಿಲ್ಲ. ಕಾಸ್ಟಿಂಗ್ ಕೌಚ್ ಬಗ್ಗೆ ನನ್ನ ಲೈಫ್‌ನಲ್ಲಿ ನನಗೆ ಅನುಭವವಾಗಿಲ್ಲ. ಲೈಫ್ ನಲ್ಲಿ ಎರಡು ಥರದ ಜೀವನ ಇದೆ. ಒಂದು ಶಾರ್ಟ್ ಕಟ್, ಮತ್ತೊಂದು ಲಾಂಗ್ ಲೈಫ್. ಕಷ್ಟಪಟ್ಟರೆ ನಾವು ಬೆಳೆಯುತ್ತೇವೆ ಅಷ್ಟೇ, ಪ್ರತಿಯೊಂದು ಹಂತಹಂತವಾಗಿ ಆಗುತ್ತದೆಯೇ ಹೊರತು, ಶಾರ್ಟ್ ಕಟ್ ತಗೊಂಡರೆ ಕೆಲವೊಮ್ಮೆ ರಾಂಗ್ ಪರ್ಸನ್ ಮೀಟ್ ಮಾಡಬೇಕಾಗುತ್ತೆ. ಅತೀ ಶೀಘ್ರದಲ್ಲಿ ನೇಮು, ಫೇಮು, ದುಡ್ಡು ಗಳಿಸೋದನ್ನ ಬಿಟ್ಟು ನಮ್ಮ ಕೆಲಸದ ಮೇಲೆ ವಿಶ್ವಾಸವಿಟ್ಟು, ನಾವು ಏನು ಮಾಡುತ್ತೇವೆ ಅನ್ನೋದರ ಮೇಲೆ ಫೋಕಸ್ ಮಾಡಬೇಕು. ಹನ್ನೆರಡು ವರ್ಷದಿಂದ ಇಂಡಸ್ಟ್ರೀಯಲ್ಲಿದ್ದೇನೆ. ನಾನು ಕಾಸ್ಟಿಂಗ್ ಕೌಚ್ ಬಗ್ಗೆ ನೋಡಿಲ್ಲ. ಯಾರಾದರೂ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದರೆ ಬಹುಶಃ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ಥರ ಅನುಭವ ಆಗಿರಬೇಕು, ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ ಎಂದು ನಟಿ ರಾಗಿಣಿ ಹೇಳಿದರು.

ಪ್ರಶಾಂತ ಸಂಬರಗಿಯವರು ನನಗೆ ನಿಜವಾಗಿಯೂ ಪರಿಚಯವಿಲ್ಲ. ಅವರೊಂದಿಗೆ ನಾನು ಮಾತಾಡಿಯೂ ಇಲ್ಲ. ಅವರು ಏನು ಮಾತಾಡ್ತಾರೋ ಮಾತಾಡಲಿ, ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದನ್ನು ನಾನು ತಡೆಯಲು ಸಾಧ್ಯವಿಲ್ಲ. ನಾನು ಏನು ಮಾಡುತ್ತೇನೆ, ಏನು ಮಾತಾಡುತ್ತೇನೆ ಅನ್ನೋದನ್ನು ಮಾತ್ರ ಕಂಟ್ರೋಲ್ ಮಾಡುತ್ತೇನೆ ಎಂದರು.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99