-->

 ತಿಮಿಂಗಿಲ ನುಂಗಿದ ಬಳಿಕವೂ ಬದುಕುಳಿದ ಮೀನುಗಾರ: ಎಫ್ ಬಿಯಲ್ಲಿ ಇವನು ಹೇಳಿದ್ದೇನು?

ತಿಮಿಂಗಿಲ ನುಂಗಿದ ಬಳಿಕವೂ ಬದುಕುಳಿದ ಮೀನುಗಾರ: ಎಫ್ ಬಿಯಲ್ಲಿ ಇವನು ಹೇಳಿದ್ದೇನು?


ನ್ಯೂಯಾರ್ಕ್: ಆಳ ಸಮುದ್ರದಲ್ಲಿ ಸಿಗಡಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ತಿಮಿಂಗಿಲವೊಂದು ತನ್ನನ್ನು ಜೀವಂತವಾಗಿ ನುಂಗಿ ಹಾಕಿದೆ. ಸ್ವಲ್ಪ ಹೊತ್ತಿನ ಬಳಿಕ ಅದು ನನ್ನನ್ನು ಹೊರಗೆ ಉಗುಳಿತು, ಹಾಗಾಗಿ, ಈ ಕತೆಯನ್ನು ನನಗೆ ಎಫ್ ಬಿಯಲ್ಲಿ ಹೇಳಲು ನನಗೆ ಸಾಧ್ಯವಾಯಿತು ಎಂದು ಮೈಕಲ್ ಪ್ಯಾಕರ್ಡ್ ಎಂಬಾತ ಬರೆದಿದ್ದಾರೆ.

 ‘‘ಹಂಪ್ಬ್ಯಾಕ್ ತಿಮಿಂಗಿಲ ನನ್ನನ್ನು ತಿನ್ನಲು ಯತ್ನಿಸಿದ್ದು, ನನಗೆ ಕೆಲವು ಗಾಯವಾಗಿದೆ. ಆದರೆ ಎಲುಬುಗಳು ಮುರಿದಿಲ್ಲ. ನಾನು ತಿಮಿಂಗಿಲದ ಮುಚ್ಚಿದ ಬಾಯಿಯ ಒಳಗೆ 30-40 ಸೆಕೆಂಡುಗಳ ಕಾಲ ಇದ್ದು, ಬಳಿಕ ಅದು ಸಮುದ್ರದ ಮೇಲ್ಮೈಗೆ ಬಂದು ನನ್ನನ್ನು ಹೊರಗೆ ಉಗುಳಿದೆ’’ ಎಂದು ಅವರು ಬರೆದುಕೊಂಡಿದ್ದಾರೆ.

ಅಮೆರಿಕಾ ದೇಶದ ಮ್ಯಾಸಚೂಸಿಟ್ಸ್ ರಾಜ್ಯದ ಸಮುದ್ರದಲ್ಲಿ ಸಿಗಡಿ ಹಿಡಿಯಲು ಆಳಕ್ಕೆ ಮುಳುಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯ ‘ಕೇಪ್ ಕಾಡ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.  

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99