ಓಡಿ ಹೋಗಿ ಮದುವೆಯಾದ ಸಲಿಂಗಿಗಳು; ಅವಳು ಗಂಡ-ಅವಳು ಹೆಂಡತಿ!?
Tuesday, June 15, 2021
ಗುರುಗ್ರಾಮ: ಒಂದೇ ಲಿಂಗದ ಇಬ್ಬರು ಸ್ನೇಹಿತೆಯರು ಓಡಿಹೋಗಿ ದೇವಸ್ಥಾನದಲ್ಲಿ ಮದುವೆಯಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಈ ಸ್ನೇಹಿತೆಯರು ಏಳು ವರ್ಷ ಒಟ್ಟಿಗೇ ಇದ್ದು ಇದೀಗ ವಿವಾಹವಾಗಿದ್ದಾರೆ. ಪಟೌಡಿಯ ನಿವಾಸಿ 20 ವರ್ಷದ ಯುವತಿ, ಝಜ್ಜರ್ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿಯ 19 ವರ್ಷದ ಯುವತಿಯ ಸ್ನೇಹವಾಗಿತ್ತು. ಅಂದಿನಿಂದ ಏಳು ವರ್ಷ ಒಟ್ಟಿಗೇ ಒಂದೇ ಮನೆಯಲ್ಲಿ ಸಂಸಾರ ಮಾಡಿಕೊಂಡು ಇದ್ದರು. ಇವರ ವಿಷಯ ತಿಳಿಯುತ್ತಿದ್ದಂತೆಯೇ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದಾರೆ.
ಪಟೌಡಿ ಪ್ರದೇಶದ ಯುವತಿಗೆ ಝಜ್ಜರ್ ಮೂಲದ ಯುವತಿ ತಾಳಿ ಕಟ್ಟಿದ್ದು ಮದುವೆಯಾಗಬೇಕೆಂಬ ವಿಷಯವನ್ನು ಕುಟುಂಬದವರಿಗೆ ತಿಳಿಸಿದಾಗ ಅವರು ಒಪ್ಪಿರಲಿಲ್ಲ. ಆನಂತರ ಇಬ್ಬರೂ ನಾಪತ್ತೆಯಾಗಿದ್ದರು. 10 ದಿನಗಳ ಹುಡುಕಾಟದ ನಂತರ ಪತ್ತೆಯಾಗಿದ್ದು, ಮದುವೆಯಾಗಿರುವ ವಿಷಯ ಪಾಲಕರಿಗೆ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.