
ದೇವಿ ವಿಗ್ರಹ ಕ್ಕಾಗಿ 30 ಅಡಿಯ ಬಾವಿ ಕೊರೆಸಿದ ಮಹಿಳೆ
Tuesday, June 15, 2021
ಆಂಧ್ರ ಪ್ರದೇಶ : ಮಹಿಳೆಯೊಬ್ಬರು ದೇವರ ವಿಗ್ರಹ ಸಿಗುತ್ತೆ ಎಂದು 30 ಅಡಿ ಆಳದ ಬಾವಿ ಕೊರೆಸಿರುವ ಘಟನೆ ವಿಜ್ಯಾನಗರಂ ಜಿಲ್ಲೆಯಲ್ಲಿ ನಡೆದಿದೆ.
ಕಂಡಿ ಲಕ್ಷ್ಮಿ ಎಂಬ ಮಹಿಳೆ ವಿಗ್ರಹಕ್ಕಾಗಿ ದೊಡ್ಡ ಬಾವಿಯನ್ನು ಕೊರೆಸಿದ್ದು ತನ್ನ ಕನಸಿನಲ್ಲಿ ಬಂದಿದ್ದ ರಾಜರಾಜೇಶ್ವರಿ ದೇವಿ, ನನಗಾಗಿ ನೀನು ಒಂದು ದೇವಾಲಯವನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ ಹೀಗಾಗಿ, ದೇವರ ವಿಗ್ರಹಕ್ಕಾಗಿ 1 ಲಕ್ಷ 50 ಸಾವಿರ ರೂಪಾಯಿ ಖರ್ಚು ಮಾಡಿ ಕೂಲಿ ಆಳುಗಳನ್ನು ಇಟ್ಟು ಕೃಷಿ ಭೂಮಿಯಲ್ಲಿ 30 ಅಡಿ ಆಳವನ್ನು ತೋಡಿಸಿದ್ದಾರೆ.
ಇನ್ನೆರಡ್ಮೂರು ದಿನಗಳಲ್ಲಿ ವಿಗ್ರಹ ಸಿಕ್ಕೇ ಸಿಗುತ್ತೆ, ನಾನು ದೇವಾಲಯವನ್ನು ಕಟ್ಟಿಸುತ್ತೇನೆ. ಇದಕ್ಕಾಗಿ ತಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿದರೂ ಸರಿಯೇ ಎಂದಿದ್ದಾರಂತೆ.