-->

12 ನಿಮಿಷಗಳಲ್ಲಿ 17 ಕೆಜಿ ಚಿನ್ನಾಭರಣ ದರೋಡೆ!

12 ನಿಮಿಷಗಳಲ್ಲಿ 17 ಕೆಜಿ ಚಿನ್ನಾಭರಣ ದರೋಡೆ!


ಚುರು (ರಾಜಸ್ಥಾನ): ಮಣಪ್ಪುರಂ ಗೋಲ್ಡ್​ ಶಾಖೆಯಲ್ಲಿ ನಾಲ್ವರು ದುಷ್ಕರ್ಮಿಗಳು 12 ನಿಮಿಷಗಳಲ್ಲಿ 17 ಕೆಜಿ ಚಿನ್ನಾಭರಣ ಹಾಗೂ 9 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿದ ಘಟನೆ ನಡೆದಿದೆ.

ಶಾಖೆಯ ಸಿಬ್ಬಂದಿಯನ್ನು ಬಾತ್​ರೂಂನೊಳಗೆ ಕೂಡಿ ಹಾಕಿ ಬಳಿಕ ಖದೀಮರು ಲೂಟಿ ಮಾಡಿದ್ದಾರೆ. ಲೂಟಿಯಾಗಿರುವ ಚಿನ್ನದ ಮೌಲ್ಯ ಅಂದಾಜು ಐದು ಕೋಟಿ ರೂಪಾಯಿಗೂ ಅಧಿಕ ಎಂದು ತಿಳಿದು ಬಂದಿದೆ.

ಕಳ್ಳತನ ಮಾಡುವ ಮೊದಲು ಖದೀಮರು ಸಿಸಿಟಿವಿಯ ವೈರ್​ಗಳನ್ನು ಕಟ್ ಮಾಡಿದ್ದಾರೆ. ಬಳಿಕ ಸಿಬ್ಬಂದಿಗೆ ಬೆದರಿಕೆ ಹಾಕಿ ಬಾತ್​ರೂಂನೊಳಗೆ ಕೂಡಿ ಹಾಕಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99