ತಪ್ಪಿ ಹರಿದಾಡಿತು ಆಕೆಯ ಬೆತ್ತಲೆ ಪೊಟೋ- ಇದಕ್ಕಾಗಿ ಆ್ಯಪಲ್ ಪೋನ್ ಕೋಟಿ ಕೋಟಿ ನೀಡಲು ಮುಂದಾಯ್ತ?
Sunday, June 13, 2021
ಕ್ಯಾಲಿಫೋರ್ನಿಯಾ: ಐ ಫೋನ್ ತಯಾರಿಕಾ ಆ್ಯಪಲ್ ಸಂಸ್ಥೆಯು ಮಾಡಿರುವ ತಪ್ಪಿನಿಂದಾಗಿ ಯುವತಿಯೋರ್ವಳಿಗೆ ಕೋಟಿ ಕೋಟಿ ಹಣ ನೀಡಲು ಮುಂದಾಗಿದೆ. ಅಷ್ಟಕ್ಕೂ ಸಂಸ್ಥೆ ಮಾಡಿದ ತಪ್ಪೇನು? ಯುವತಿಗಾದ ನಷ್ಟವೇನು ಎಂದು ತಿಳಿಯಲು ಮುಂದೆ ಓದಿ.
ಕ್ಯಾಲಿಫೋರ್ನಿಯಾದ 21 ವರ್ಷದ ಯುವತಿಯೋರ್ವಳ ಐ ಫೋನ್ ಹಾಳಾಗಿತ್ತು. ಅದನ್ನು ಸರಿಪಡಿಸಲೆಂದು ಹತ್ತಿರದಲ್ಲಿದ್ದ ಐ ಫೋನ್ ಕಂಟ್ಯಾಕ್ಟರ್ ಆಗಿರುವ ಪೆಗಟ್ರಾನ್ ಸಂಸ್ಥೆಯ ಅಂಗಡಿಗೆ ಮೊಬೈಲ್ನ್ನು ಕೊಟ್ಟುಹೋಗಿದ್ದಾಳೆ. ಆದರೆ ಆ ಬಳಿಕ ಆಕೆಯ ಮತ್ತೊಂದು ಮೊಬೈಲ್ ಫೋನ್ಗೆ ನಿನ್ನ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ಫೇಸ್ಬುಕ್ ಪೇಜ್ನಲ್ಲಿ ಏಕಾಗಿ ಹಾಕುತ್ತಿರುವೆ ಎಂದು ಆಕೆಯ ಸ್ನೇಹಿತರು ವಿಚಾರಿಸಲಾರಂಭಿಸಿದ್ದಾಳೆ.
ಇದರಿಂದ ಗಾಬರಿ ಬಿದ್ದ ಆಕೆ ಈ ಬಗ್ಗೆ ವಿಚಾರಿಸಿದಾಗ, ತಾನು ರಿಪೇರಿ ಮಾಡಲು ಕೊಟ್ಟಿರುವ ಮೊಬೈಲ್ನಿಂದಲೇ ಈ ರೀತಿಯ ಫೋಟೋಗಳು ಅಪ್ಲೋಡ್ ಆಗಿರುವುದು ತಿಳಿದುಬಂದಿದೆ.
ಈ ಬಗ್ಗೆ ದೂರು ನೀಡಿರುವ ಯುವತಿ ಮಾನ ನಷ್ಟವೆಂದು ಸಂಸ್ಥೆಯು ತನಗೆ 5 ಮಿಲಿಯನ್ ಡಾಲರ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಅದಕ್ಕೆ ಆ್ಯಪಲ್ ಸಂಸ್ಥೆ ಒಪ್ಪಿಕೊಂಡಿದ್ದು, ಆಕೆಗೆ 5 ಮಿಲಿಯನ್ ಡಾಲರ್ ನೀಡಿದೆ ಎನ್ನಲಾಗಿದೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಲಾಗಿಲ್ಲ.