INDIA

ಹಜ್ ಯಾತ್ರೆ ಸಿದ್ದರಾಗಿದ್ದ ಭಾರತೀಯ ಮುಸ್ಲಿಮರಿಗೆ ನಿರಾಸೆ; ಸೌದಿ ಅರೇಬಿಯ ನಿವಾಸಿಗಳಿಗೆ ಮಾತ್ರ ಈ ಬಾರಿ ಹಜ್ ಯಾತ್ರೆಗೆ ಅವಕಾಶ

ಸೌದಿ ಅರೇಬಿಯಾ: ಕೋವಿಡ್‌-19 ಕಾರಣದಿಂದಾಗಿ ಈ ಬಾರಿ ಗರಿಷ್ಠ 60 ಸಾವಿರ ಮಂದಿಗೆ ಮಾತ್ರ ಧಾರ್ಮಿಕ ಯಾತ್ರೆಯನ್ನು ಸೀಮಿತಗೊಳಿಸುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

 ಕೇವಲ ತನ್ನ ದೇಶದ ಜನರಿಗೆ ಹಜ್ ಯಾತ್ರೆಗೆ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ. ಹಜ್ ಯಾತ್ರೆ ಮಾಡಲು ಉದ್ದೇಶಿಸುವ ದೇಶದೊಳಗಿನ ನಾಗರಿಕರು ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 

 ಈ ವರ್ಷ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾದಿಂದ ಚೇತರಿಸಿಕೊಂಡ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರದ 18ರಿಂದ 65 ವರ್ಷದೊಳಗಿನ ವ್ಯಕ್ತಿಗಳಿಗೆ ಮಾತ್ರ ನೋಂದಣಿಗೆ ಅವಕಾಶ ಎಂದು ತಿಳಿಸಿದೆ.
ಟ್ಯಾಗ್‌ಗಳು: INDIA SPECIAL